ಗೋಕಾಕ:ನಗರಸಭೆಯ ಸ್ಥಾಯಿ ಸಮಿತಿಯ ಚೇರಮನ ಕೆ.ಎಂ ಗೋಕಾಕ ಅವರಿಂದ ನಿರ್ಗತಿಕರಿಗೆ ದಿನಸಿ ಕಿಟ್ ವಿತರಣೆ
ನಗರಸಭೆಯ ಸ್ಥಾಯಿ ಸಮಿತಿಯ ಚೇರಮನ ಕೆ.ಎಂ ಗೋಕಾಕ ಅವರಿಂದ ನಿರ್ಗತಿಕರಿಗೆ ದಿನಸಿ ಕಿಟ್ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 19 :
ನಗರಸಭೆಯ ಸ್ಥಾಯಿ ಸಮಿತಿಯ ಚೇರಮನರಾದ ಕೆ.ಎಂ ಗೋಕಾಕ ಅವರು ಬುಧವಾರದದಂದು ನಗರದ ಬಡವರಿಗೆ ಮತ್ತು ನಿರ್ಗತಿಕರಿಗೆ ದಿನಸಿ ಕಿಟಗಳನ್ನು ವಿತರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಜಾವೇದ ಗೋಕಾಕ ಲಾಕಡೌನ ಸಂದರ್ಭದಲ್ಲಿ ಹಲವಾರು ಬಡ ನಿರ್ಗತಿಕರು ತಮ್ಮ ಜೀವನವನ್ನು ನಡೆಸುವುದು ಕಷ್ಟಕರವಾಗಿದ್ದು, ಅವರ ಕಷ್ಟದಲ್ಲಿ ಭಾಗಿಯಾಗುವ ಸದುದ್ದೇಶದಿಂದ ನಮ್ಮ ಪರಿವಾರದಿಂದ ನಿರ್ಗತಿಕರಿಗೆ ಹಾಗೂ ಬಡವರಿಗೆ ದಿನಸಿ ಕಿಟಗಳನ್ನು ವಿತರಿಸಲಾಗುತ್ತಿದ್ದು, ಸರಕಾರ ವಿಧಿಸಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕೊರೋನಾ ಮಹಾಮಾರಿ ವಿರುದ್ಧ ಹೋರಾಡಿ ಕೊರೋನಾವನ್ನು ಸೋಲಿಸಲು ಎಲ್ಲರೂ ಪಣತೊಡಬೇಕಿಗಿದೆ. ಸಮಾಜಿಕ ಅಂತರ, ಮಾಸ್ಕ ಧಾರಣೆ ಮಾಡಿ ಸರಕಾರದ ಜೊತೆಗೆ ಪ್ರತಿಯೊಬ್ಬರು ಸಹಕರಿಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಪರಟ್ಟಿಯ ಕಳ್ಳಿಗುದ್ದಿ ಮಠದ ಬಸವರಾಜ ಸ್ವಾಮಿಗಳು, ಡಿ.ವಾಯ್.ಎಸ.ಪಿ ಜಾವೇದ ಇನಾಂದಾರ, ಸ್ಥಾಯಿ ಸಮಿತಿ ಚೇರಮನ್ ಕುತುಬ್ಬುದ್ದೀನ ಗೋಕಾಕ,ಹಾಜಿ ಕುತುಬ್ಬುದ್ದೀನ ಬಸ್ಸಾಪೂರಿ , ಹಾಜಿ ಅಬ್ದುಲ್ ಗಫಾರ ಕಾಗಜಿ, ಇಸ್ಮಾಯಿಲ್ ಜಮಾದಾರ, ಸಲ್ಲಿಂ ಗೋಕಾಕ, ಜಾಫರ್ ಶಫೀ, ಕಯ್ಯೂಮ ಖೈರದಿ, ಯೂಸೂಪ ಗೋಕಾಕ, ಮಹಾಂತೇಶ ಗವಿಮಠ ಇದ್ದರು.