ಗೋಕಾಕ:ಮುಖ್ಯಮಂತ್ರಿ ಪರಿಕ್ಕರ್ ನಿಧನಕ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಶೋಕ
ಮುಖ್ಯಮಂತ್ರಿ ಪರಿಕ್ಕರ್ ನಿಧನಕ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಶೋಕ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 18 :
ಗೋವಾ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಮನೋಹರ ಪರಿಕ್ಕರ್ ಅವರ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಪರಿಕ್ಕರ ಅವರ ನಿಧನದಿಂದ ಪಕ್ಷ ಹಾಗೂ ದೇಶಕ್ಕೆ ನಷ್ಟವಾಗಿದೆ. ಗೋವಾ ಮುಖ್ಯಮಂತ್ರಿಯಾಗಿ, ದೇಶದ ರಕ್ಷಣಾ ಸಚಿವರಾಗಿ ಅಪ್ರತೀಮ ಸೇವೆ ಸಲ್ಲಿಸಿದ್ದರು. ಮಿ.ಕ್ಲೀನ್ ಎಂದೇ ಖ್ಯಾತರಾಗಿದ್ದ ಅವರು, ದಕ್ಷ, ಪ್ರಾಮಾಣಿಕತೆಯ ಆಡಳಿತಗಾರರಾಗಿದ್ದರು. ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ನಿವೃತ್ತ ಯೋಧರಿಗೆ ಒಂದು ದೇಶ ಒಂದು ಪಿಂಚಣಿಯನ್ನು ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೇ ಪಾಕ ಅಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಕೀರ್ತಿ ಮನೋಹರ ಪರಿಕ್ಕರ್ ಅವರಿಗೆ ಸಲ್ಲತಕ್ಕದ್ದು. ಬಿಜೆಪಿಯ ಟ್ರಬಲ್ ಶೂಟರ್ ಆಗಿದ್ದ ಶಿಸ್ತು, ಸರಳತೆಯ ಪರಿಕ್ಕರ್ ನಿಧನದಿಂದ ಕುಟುಂಬದಲ್ಲಾದ ದುಃಖವನ್ನು ಸಹಿಸುವ ಶಕ್ತಿಯನ್ನು ಹಾಗೂ ಪರಿಕ್ಕರ್ ಆತ್ಮಕ್ಕೆ ಚಿರಶಾಂತಿ ದೊರೆಯುವಂತೆ ದೇವರಲ್ಲಿ ಪ್ರಾರ್ಥಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.