RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಜಯಶ್ರೀ ಕೊಣ್ಣುರ ನಿಧನ

ಗೋಕಾಕ:ಜಯಶ್ರೀ ಕೊಣ್ಣುರ ನಿಧನ 

ಜಯಶ್ರೀ ಕೊಣ್ಣುರ ನಿಧನ
ಗೋಕಾಕ ಮೇ 7 : ನಗರದ ಬಾಂಬೆಚಾಳ ನಿವಾಸಿ ಹಾಗೂ ಮಮದಾಪೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಚಂದ್ರಶೇಖರ ಕೊಣ್ಣುರ 50 ಇವರು ಅನಾರೋಗ್ಯದ ಹಿನ್ನಲೆ ಶುಕ್ರವಾರದಂದು ನಿಧನರಾದರು.
ಮೃತರು ಗೋಕಾಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ ಅವರ ಪತ್ನಿಯಾಗಿದ್ದು, ಒರ್ವ ಪುತ್ರ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ: ಮಮದಾಪೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಚಂದ್ರಶೇಖರ ಕೊಣ್ಣುರ ಅವರ ನಿಧನಕ್ಕೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಯಮಕನಮರ್ಡಿ ಶಾಸಕ ಸತೀಶ ಜಾರಕಿಹೊಳಿ, ಲಖನ್ ಜಾರಕಿಹೊಳಿ ಸೇರಿದಂತೆ ಹಲವಾರು ಗಣ್ಯರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.

Related posts: