RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಸಮಾಜ ನಿರೀಕ್ಷಿಸುವ ಗತಿಯಲ್ಲಿ ಪ್ರಕರಣಗಳ ಇತ್ಯರ್ಥಗೋಳಿಸಿ ಪರಿಹಾರ ದೊರಕಿಸಿ : ನ್ಯಾಯಾಧೀಶ ಸಿ.ಎಂ.ಜೋಶಿ

ಗೋಕಾಕ:ಸಮಾಜ ನಿರೀಕ್ಷಿಸುವ ಗತಿಯಲ್ಲಿ ಪ್ರಕರಣಗಳ ಇತ್ಯರ್ಥಗೋಳಿಸಿ ಪರಿಹಾರ ದೊರಕಿಸಿ : ನ್ಯಾಯಾಧೀಶ ಸಿ.ಎಂ.ಜೋಶಿ 

ಸಮಾಜ ನಿರೀಕ್ಷಿಸುವ ಗತಿಯಲ್ಲಿ ಪ್ರಕರಣಗಳ ಇತ್ಯರ್ಥಗೋಳಿಸಿ ಪರಿಹಾರ ದೊರಕಿಸಿ : ನ್ಯಾಯಾಧೀಶ ಸಿ.ಎಂ.ಜೋಶಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 4 :

 

ಸಮಾಜ ನಿರೀಕ್ಷಿಸುವ ಗತಿಯಲ್ಲಿ ಪ್ರಕರಣಗಳ ಇತ್ಯರ್ಥ ಹಾಗೂ ಪರಿಹಾರ ದೊರಕಿಸಲು ನ್ಯಾಯಾಂಗ ಮತ್ತು ವಕೀಲ ಸಮುದಾಯದಿಂದ ಸಾಧ್ಯವಾಗುತ್ತಿದೆಯೇ ?’ ಎಂಬುದರ ಪರಾಮರ್ಶೆ ನಡೆಸುವ ಸಮಯ ಇದಾಗಿದೆ ಎಂದು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಶಿ ಅಭಿಪ್ರಾಯಪಟ್ಟರು

ಶನಿವಾರದಂದು ಸಾಯಂಕಾಲ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಗೋಕಾಕ ವಕೀಲರ ಸಂಘದ ನೂತನ ಪದಾಧಿಕಾರಿಗಳ 2021-2022ನೇ ಸಾಲಿನ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂಘದಿ ವತಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಇಲ್ಲಿನ ವಕೀಲರ ಸಂಘದ ನೂತನ ಪದಾಧಿಕಾರಿಗಳು ಇಂಥ ಗಂಭೀರ ವಿಷಯವನ್ನು ಗಮದಲ್ಲಿಟ್ಟುಕೊಂಡು ಸಂಘದ ಸದಸ್ಯರಿಗಾಗಿ ವಿನೂತನ ವಗೆಯ ಕಾರ್ಯ ಚಟುವಟಿಕೆಗಳನ್ನು ರೂಪಿಸುವತ್ತ ಗಮನ ಹರಿಸಲಿ ಎಂದು ಕಿವಿಮಾತು ಹೇಳಿದರು.
ವೃತ್ತಿ ಪರತೆಯನ್ನು ಸದಾ ಮೊಣಚುಗೊಳಿಸುತ್ತಾ ಹೋದಂತೆ ನಮ್ಮ ಕಾರ್ಯಗಳಲ್ಲಿ ನಾವು ಉನ್ನತ ಸಾಧನೆ ಮಾಡಲು ಸಾಧ್ಯ ಎಂದ ಅವರು, ತಾಂತ್ರಿಕತೆಯಿಂದ ಕೂಡಿರುವ ಇಂದಿನ ನ್ಯಾಯದಾನ ವ್ಯವಸ್ಥೆಯನ್ನು ನಾವು ಮೈಗೂಡಿಸಿಕೊಂಡಾಗ ಮಾತ್ರ ವೃತ್ತಿಯಲ್ಲಿ ವಿಶೇಷ ಸಾಧನೆಯನ್ನು ಗೈಯಲು ಸಾಧ್ಯ ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಯು.ಬಿ.ಶಿಂಪಿ ಅವರು ನೂತನ ಅಧ್ಯಕ್ಷ ಸಿ.ಡಿ.ಹುಕ್ಕೇರಿ ಅವರಿಗೆ ಸಂಘದ ಲೆಕ್ಕಪತ್ರಗಳನ್ನೊಂಡ ಖಾತೆ-ವಹಿಯನ್ನು ಹಸ್ತಾಂತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಇಲ್ಲಿನ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದಶೆಟ್ಟಿ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ವಕೀಲರ ಸಂಘದ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಹಿರಿಯ ವಕೀಲ ರವೀಂದ್ರ ಎಚ್. ಇಟ್ನಾಳ ಅವರನ್ನೂ ವೇದಿಕೆ ಪರವಾಗಿ ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಹಿರಿಯ ವಕೀಲರ ಸಮಿತಿ ಚೇರಮನ್ ಬಿ.ಆರ್.ಕೊಪ್ಪ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ವಿಮಲ್ ಆರ್. ನಂದಗಾಂವ, ದಿವಾಣಿ ನ್ಯಾಯಾಧೀಶರಾದ ವಿರೇಶಕುಮಾರ ಸಿ.ಕೆ., ಶೋಭಾ ಮತ್ತು ಮೋಹನ ಪೋಳ, ನೂತನ ಉಪಾಧ್ಯಕ್ಷ ಆನಂದ ಪಾಟೀಲ, ಕಾರ್ಯದರ್ಶಿ ಎಸ್.ಎಂ.ಕುದರಿ, ಮಹಿಳಾ ಪ್ರತಿನಿಧಿ ಗೀತಾ ಎಸ್. ಗಂಜಿ ಸೇರಿದಂತೆ ಇತರೆ ಪದಾಧಿಕಾರಿಗಳು ಇದ್ದರು.
ಪ್ರಮಿಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಬಿ.ಟಿ.ಬೀರನಗಡ್ಡಿ ಸ್ವಾಗತಿಸಿದರು. ಹಿರಿಯ ವಕೀಲ ವಿ.ವಿ.ಕುಲಕರ್ಣಿ ಪ್ರಾಸ್ತಾಕವಿಕ ಮಾತುಗಳನ್ನಾಡಿದರು. ಎ.ವಿ.ಹುಲಗಬಾಳಿ ಮತ್ತು ಎಸ್.ಬಿ.ಗೋರೋಶಿ ಜಂಟಿಯಾಗಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ವೈ.ಕೆ.ಕೌಜಲಗಿ ವಂದಿಸಿದರು.

Related posts: