RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ

ಗೋಕಾಕ:ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ 

ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ

ಗೋಕಾಕ ಜ 8: ದೇಶದ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ ಹೇಳಿದರು.
ರವಿವಾರದಂದು ತಾಲೂಕಿನ ಬಸಳಿಗುಂದಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹಸಿರು ಶಾಲು ದೀಕ್ಷಾ ಹಾಗೂ ನೂತನ ಗ್ರಾಮ ಘಟಕದ ಉದ್ಘಾಟನೆ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಅವರು ರೈತರು ಹಗಲಿರುಳು ಶ್ರಮಿಸಿ ತಾನು ಬೆಳೆದ ಬೆಳೆಯ ಪ್ರತಿಫಲವನ್ನು ಉಣ್ಣಬೇಕಾದರೇ ಹೋರಾಟ ಹಾಗೂ ಪ್ರತಿಭಟನೆಗಳನ್ನು ನಡೆಸಿ ಬದುಕುವಂತಾಗಿದೆ ಕಳವಳ ವ್ಯಕ್ತಪಡಿಸಿದರು.
ರೈತರಿಗೆ ನೀರಾವರಿ ಯೋಜನೆ, ನಿರಂತರವಾಗಿ ವಿದ್ಯುತ್, ಸಕಾಲದಲ್ಲಿ ಬಿತ್ತನೇ ಬೀಜ, ರಸಗೊಬ್ಬರಗಳನ್ನು ನೀಡದೇ, ಕೃಷಿ ಅಭಿವೃದ್ದಿಯತ್ತ ಗಮನ ಹರಿಸಬೇಕಾದ ಸರ್ಕಾರಗಳು ಇನ್ನಾವುದಕ್ಕೂ ಖರ್ಚು ಮಾಡಿ ಸರ್ಕಾರದ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆಂದು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಸಂಘದ ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ ವಹಿಸಿದ್ದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿದ್ಲಿಂಗಪ್ಪ ಪೂಜೇರಿ, ಬಸಪ್ಪ ನಾಯಿಕ, ಮಹಾದೇವ ಗೋಡೇರ, ಸಿದ್ದಪ್ಪ ತಪಸಿ, ನಾಗಪ್ಪ ಕಪರಟ್ಟಿ, ಯಮನಪ್ಪ ಹಾದಿಮನಿ, ಬಾಗಪ್ಪ ಬಿಗೌಡರ, ಹಾಲಪ್ಪ ಗಣೇಶವಾಡಿ, ಮಾರುತಿ ಬಿಪಾಟೀಲ, ವೀರಪ್ಪ ಪಾಟೀಲ, ಶ್ರೀಶೈಲ ವಾಲಿಕಾರ ಸೇರಿದಂತೆ ಅನೇಕರು ಇದ್ದರು.

Related posts: