RNI NO. KARKAN/2006/27779|Sunday, May 10, 2026
You are here: Home » breaking news » ಬೆಳಗಾವಿ :ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ : ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ

ಬೆಳಗಾವಿ :ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ : ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ 

ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ : ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಮಾ 21 :

 
ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ . ಜೀವನದಲ್ಲಿ ಸಂವಹನ ಬಹಳ ಮುಖ್ಯವಾದ್ದದು, ಧರ್ಮ ಕಲಿಸಿದ ಮಾನವೀಯ ಮೌಲ್ಯಗಳನ್ನು ಮನುಷ್ಯ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ತಿದ್ದುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು
ಮುಂಬೈ ನೆರಲನ ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ ಹೇಳಿದರು.

ಶನಿವಾರದಂದು ಬೆಳಗಾವಿಯ ಅಂಜುಮನ್ ಏ ಇಸ್ಲಾಂ ಸಭಾಂಗಣದಲ್ಲಿ ರಹಮಾನ ಫೌಂಡೇಶನ್ ಬೆಳಗಾವಿ ಅವರು ಹಮ್ಮಿಕೊಂಡ “ನಿಮ್ಮ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ” ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಮನುಷ್ಯ ಧರ್ಮ ಕಲಿಸಿದ ಮೌಲ್ಯಗಳನ್ನು ಬಿಟ್ಟು ಜೀವನ ನಡೆಯಿಸಿದರೆ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬಿರುತ್ತದೆ. ಯಾವ ಸಮುದಾಯ ಶೈಕ್ಷಣಿಕವಾಗಿ ಸಮೃದ್ಧವಾಗಿರುತ್ತದೆ‌ ಅದು ಬದಲಾವಣೆಗೆ ತಕ್ಕಂತೆ ಪರಿವರ್ತನೆ ಯಾಗುತ್ತದೆ. ಕೋಪದಲ್ಲಿ ತಗೆದುಕೊಳ್ಳುವ ನಿರ್ಧಾರಗಳು ಜೀವನದಲ್ಲಿ ಅವಘಡಗಳನ್ನು ಸೃಷ್ಟಿಸುತ್ತವೆ. ಧನಾತ್ಮಕವಾದ ವಿಚಾರಗಳಿಂದ ನಮ್ಮ ಮುಂದಿರುವ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಕೊಳ್ಳಬೇಕು ವಿನಹ ಕೋಪದಿಂದಲ್ಲ.

ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಪಠಿಸುವ ಮಹಾನುಭಾವರನ್ನು ನಾವು ಪ್ರೀತಿಯಿಂದ, ಪೂಜ್ಯನೀಯ ಭಾವನೆಯಿಂದ ಗೌರವಿಸಿದರೆ ಮಾತ್ರ ನಾವು ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣಲು ಸಾಧ್ಯ. ಸಮಾಜ , ಸಮುದಾಯವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಇತಿಹಾಸವನ್ನು ಸೃಷ್ಟಿಸಿದ್ದಂತಹ ಮಹನೀಯರ ತತ್ವ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಪ್ರಚುರ ಪಡಿಸುವ ಮಹತ್ವದ ಕಾರ್ಯ ಸಮಾಜದಲ್ಲಿ ಆಗಬೇಕಾಗಿದೆ. ಅನುಭಾವಿಗಳ ತತ್ವ ಸಿದ್ದಾಂತಗಳನ್ನು ನಾವು ಗೌರವಿಸಿಲ್ಲದರ ಪರಿಣಾಮ ಇಂದು ಸಮುದಾಯಗಳು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ.

ಸಮುದಾಯಗಳನ್ನು ಸರಿ ದಾರಿಯಲ್ಲಿ ನಡೆಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಇದನ್ನು ಪ್ರತಿಯೊಬ್ಬರು ತಮ್ಮ ಕರ್ತವ್ಯ ಎಂದು ಭಾವಿಸಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಆತಂಕದ ದಿನಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಅರಿತು ಸಮುದಾಯದ ಅನುಭಾವಿಗಳು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸದರೆ ಮಾತ್ರ ಸಮುದಾಯಗಳನ್ನು ಸರಿಯಾದ ಮಾರ್ಗದಲ್ಲಿ ಸಾಗಿಸಲು ಸಾಧ್ಯವಾಗತ್ತದೆ.

ಸಮುದಾಯಗಳನ್ನು ಸರಿ ದಾರಿಯತ್ತ ಕೊಂಡೊಯ್ಯಲು ಅನುಭಾವಿಗಳ ಮಾರ್ಗದರ್ಶನ ಅವಶ್ಯಕತೆ ಇದೆ . ಗುರಿ ಇಲ್ಲದ , ಆದರ್ಶ ಇಲ್ಲದ ಜೀವನ ವ್ಯರ್ಥ. ಇದನ್ನು ಯುವಕರಿಗೆ ತಿಳಿಸುವ ಕಾರ್ಯವಾಗಬೇಕು. ಯುವಕರು ಸಮುದಾಯದ ಮೇಧಾವಿಗಳ ಸಾಮಿಪ್ಯ ಹೊಂದಿ, ಅವರ ಮಾರ್ಗದರ್ಶನ ಪಡೆದರೆ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಸಾಧ್ಯ. ಯಾವದರಿಂದ ನಮಗೆ ನಷ್ಟ ವಿದೆಯೊ ಅಂತಹುದರಿಂದ ನಾವು ದೂರವಿರುವದನ್ನು ಕಲಿತುಕೊಳ್ಳಬೇಕು ಎಂದ ಅವರು ದೀಪದಿಂದ ದೀಪ ಪ್ರಜ್ವಲಿಸುವಂತೆ ಅನುಭಾವಿಗಳ ಸಂಗಾತ್ಯದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಹೊಂದಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ನಾವಿಂದು ಮುಂದೆ ಸಾಗಬೇಕಾಗಿದೆ. ಎಲ್ಲರನ್ನು ಪ್ರೀತಿ, ಗೌರವದಿಂದ ಕಾಣಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಅವುಗಳಲ್ಲಿನ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರು ಮೆಚ್ಚುವ ಹಾಗೆ ಜೀವನವನ್ನು ನಡೆಸಿದರೆ ಮಾತ್ರ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದು ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ ಹೇಳಿದರು.

ಈ ಸಂದರ್ಭದಲ್ಲಿ ಮುಫ್ತಿ ಖಾಲಿದ ಇದ್ದರು.

Related posts: