RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ : ಬಾಬುರಾವ್ ಗೋಣಿ

ಗೋಕಾಕ:ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ : ಬಾಬುರಾವ್ ಗೋಣಿ 

ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ : ಬಾಬುರಾವ್ ಗೋಣಿ

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜ 14 :

 

ರಾಜ್ಯದ ಎಲ್ಲಾ ಶ್ರದ್ಧಾ ಕೇಂದ್ರಗಳು ಸ್ವಚ್ಛತೆ ಹಾಗೂ ಪ್ರಶಾಂತ ವಾತಾವರಣದಿಂದ ಕೂಡಿರಬೇಕೆಂಬುವುದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆಶಯವಾಗಿದೆ. ಪ್ರತಿಯೊಬ್ಬರೂ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಶ್ರೀಕ್ಷೇಧಗ್ರಾಯೋ ಕೌಜಲಗಿ ವಲಯ ಮೇಲ್ವಿಚಾರಕ ಬಾಬುರಾವ್ ಗೋಣಿ ಹೇಳಿದರು.
ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಗಳವಾರದÀಂದು ಕೌಜಲಗಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಆವರಣ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಕ್ಷೇಧಗ್ರಾಯೋ ಕೌಜಲಗಿ ವಲಯ ವ್ಯಾಪ್ತಿಯ 15 ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕೈಗೊಳ್ಳಲಾಗಿದೆ. ತಮ್ಮ ಗ್ರಾಮದ ಎಲ್ಲಾ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ ಹಾಗೂ ಶಾಂತ ವಾತಾವರಣ ಕಾಪಾಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ನೂರಜಾನ್ ಮಕಾಂದಾರ, ಸಚಿನ ತೆಲಂಗ, ದೀಪಾ ಹಿರೇಮೇತ್ರಿ, ರಮಿಜಾ ಮಹಾತ, ಶಕೀಲಾ ಪರಾಸ, ವಾಣಿಶ್ರೀ ತೆಲಂಗ ಸೇರಿದಂತೆ ಶ್ರೀಕ್ಷೇಧಗ್ರಾಯೋ ಕೌಜಲಗಿ ವಲಯ ಕಛೇರಿ ಸಿಬ್ಬಂದಿ, ಸ್ಥಳೀಯ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.

Related posts: