ಗೋಕಾಕ:ಅನರ್ಹರಾಗಿದ್ದ ಸಮಯದಲ್ಲಿ ಸಿಎಂ ಯಡಿಯೂರಪ್ಪ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು : ಸಚಿವ ರಮೇಶ
ಅನರ್ಹರಾಗಿದ್ದ ಸಮಯದಲ್ಲಿ ಸಿಎಂ ಯಡಿಯೂರಪ್ಪ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು : ಸಚಿವ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 :
ಶಾಸಕ ಸ್ಥಾನದಿಂದ ಅನರ್ಹರಾಗಿದ್ದ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೋಕಾಕ ಮತಕ್ಷೇತ್ರದ ಮೇಲೆ ಅಪಾರ ಅಭಿಮಾನ ವಿಟ್ಟು ನಗರದ ಅಭಿವೃದ್ಧಿಗೆ 25 ಕೋಟಿ ರೂ ಅನುದಾನ ಮಂಜೂರ ಮಾಡಿ ನಗರದ ಅಭಿವೃದ್ಧಿಗೆ ಸಹರಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು .
ರವಿವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಂಡ ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಗೋಕಾಕ ನಗರಸಭೆಗೆ ಮಂಜೂರಾದ 2500 ಲಕ್ಷಗಳ ( 25 ಕೋಟಿ) ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ 480 ಲಕ್ಷ ರೂಗಳಲ್ಲಿ ನಗರದ ನಾಕಾ ನಂ 1 ರಿಂದ ಡಿ.ವಾಯ್.ಎಸ್.ಪಿ ಕಛೇರಿಯವರೆಗೆ ಮತ್ತು ಎ.ಪಿ.ಎಂ.ಸಿ ರಸ್ತೆ ವಿಭಜಕದ ಮಧ್ಯದಲ್ಲಿ ಅಳವಡಿಸಿದ ಬೀದಿ ದೀಪಗಳ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಬೆಳಗಾವಿ ಜಿಲ್ಲೆಯ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತೀವ ಪ್ರೀತಿ ಅಭಿಮಾನ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಗೋಕಾಕ ಮತ್ತು ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಸರಕಾರ ಕಂಕಣಬದ್ದವಾಗಿದ್ದು, ನೀರಾವರಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಿ ಬೆಳಗಾವಿ ಜಿಲ್ಲೆಯ ಹಾಗೂ ಗೋಕಾಕ ನಗರದ ಅಭಿವೃದ್ಧಿ ಮಾಡೋಣಾ ಎಂದರು.
ವೇದಿಕೆಯಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಅರೆನ್ನವರ , ಹಿರಿಯ ನಗರಸಭೆ ಅಬ್ಬಾಸ ದೇಸಾಯಿ ಇದ್ದರು.