RNI NO. KARKAN/2006/27779|Friday, March 20, 2026
You are here: Home » breaking news » ಗೋಕಾಕ:ಗ್ರಾಮ ಪಂಚಾಯಿತಿ ಚುನಾವಣೆ ಡಾ‌.ಸಣ್ಣಕ್ಕಿ ಗುಂಪಿಗೆ ಗೆಲುವು

ಗೋಕಾಕ:ಗ್ರಾಮ ಪಂಚಾಯಿತಿ ಚುನಾವಣೆ ಡಾ‌.ಸಣ್ಣಕ್ಕಿ ಗುಂಪಿಗೆ ಗೆಲುವು 

ಗ್ರಾಮ ಪಂಚಾಯಿತಿ ಚುನಾವಣೆ ಡಾ‌.ಸಣ್ಣಕ್ಕಿ ಗುಂಪಿಗೆ ಗೆಲುವು

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 30 :

 

ರಾಜಕೀಯವಾಗಿ ಕುತೂಹಲ ಕೆರಳಿಸಿದ್ದ ಕೌಜಲಗಿ ಗ್ರಾಮ ಪಂಚಾಯತಿ ಡಾ. ರಾಜೇಂದ್ರ ಸಣ್ಣಕ್ಕಿ ಗುಂಪಿನ ತೆಕ್ಕೆಗೆ ಬಂದಿರುತ್ತದೆ. ಕಳೆದ ಎರಡು ಗ್ರಾಮ ಪಂಚಾಯತ ಚುನಾವಣೆಗಳಲ್ಲಿಯೂ ಡಾ. ಸಣ್ಣಕ್ಕಿ ಅವರ ಗುಂಪು ಅವಿರೋಧ ಆಯ್ಕೆಗೊಂಡಿತ್ತು. ಆದರೆ ಈ ಸಾರೆ ಇಡೀ ಕೌಜಲಗಿಯ ಘಟಾನುಘಟಿ ಮುಖಂಡರಾದ ಲೋಕಣ್ಣವರ, ಭೋವಿ ಹಾಗೂ ಪರುಶೆಟ್ಟಿ ಸೇರಿ ಹೇಗಾದರೂ ಮಾಡಿ ಗ್ರಾಮ ಪಂಚಾಯತಿ ಡಾ. ಸಣ್ಣಕ್ಕಿ ಅವರ ಗುಂಪಿಗೆ ಹೋಗಬಾರದೆಂದು ಚುನಾವಣೆಯಲ್ಲಿ ಆಕಾಶ-ಪಾತಾಳ ಒಂದು ಮಾಡಿದರೂ ಸಹ ಪಂಚಾಯತಿ ಒಟ್ಟು 29 ಸ್ಥಾನಗಳಲ್ಲಿ ಡಾ. ಸಣ್ಣಕ್ಕಿ ಅವರ ಗುಂಪಿಗೆ 17 ಸ್ಥಾನಗಳನ್ನು ಪಡೆದು ಗ್ರಾಮ ಪಂಚಾಯತ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಇಡೀ ತಾಲೂಕಿನ ಗಮನ ಸೆಳೆದ ಕೌಜಲಗಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಡಾ. ರಾಜೇಂದ್ರ ಸಣ್ಣಕ್ಕಿ ಅವರ ಗುಂಪು ಜಯ ಗಳಿಸುವ ಮೂಲಕ ಡಾ. ಸಣ್ಣಕ್ಕಿ ಅವರ ಪ್ರಾಬಲ್ಯ ಸಾಬೀತು ಮಾಡಿದೆ.
ಬಾಕ್ಸ
ಈ ಸಾರೆ ಕೌಜಲಗಿ ಗ್ರಾಮ ಪಂಚಾಯತಿಗೆ ಬಿ.ಇ. ಪದವೀಧರ ಇಂಜನೀಯರ ಮಂಜುನಾಥ ರಾಜೇಂದ್ರ ಸಣ್ಣಕ್ಕಿ ಅವರು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿಗಿಂತ 475 ಅಧಿಕ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

Related posts: