RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ: ಪಿಂಜಾರ ನದಾಫ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಗ್ರಹಿಸಿ ಸರಕಾರಕ್ಕೆ ಮನವಿ

ಗೋಕಾಕ: ಪಿಂಜಾರ ನದಾಫ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಗ್ರಹಿಸಿ ಸರಕಾರಕ್ಕೆ ಮನವಿ 

ಪಿಂಜಾರ ನದಾಫ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಗ್ರಹಿಸಿ ಸರಕಾರಕ್ಕೆ ಮನವಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 1 :

 
ಪಿಂಜಾರ ನಧಾಪ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿ‌ಸಬೇಕೆಂದು ಒತ್ತಾಯಿಸಿ ಇಲ್ಲಿನ ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘ ತಾಲೂಕಾ ಘಟಕದ ವತಿಯಿಂದ ಮಂಗಳವಾರದಂದು ತಹಶೀಲ್ದಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ನದಾಫ ಪಿಂಜಾರ ಜನಾಂಗವು ಶೈಕ್ಷಣಿಕವಾಗಿ , ಆರ್ಥಿಕ , ಔದ್ಯೋಗಿಕ, ಸಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ಈ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮದ ಬೇಡಿಕೆಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು . ನಮ್ಮ ಬೇಡಿಕೆ ಇಡೆರಿರುವುದಿಲ್ಲ ಈ ಜನಾಂಗಕ್ಕೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿ ಸಮುದಾಯದ ಅಭಿವೃದ್ಧಿ ಪಡಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಮೀರಾಸಾಬ ಸಧಾಪ , ಗಜಬರ ನದಾಫ , ಮುಸ್ತಾಕ ನದಾಫ , ಬಾಬರ ಶೇಖ್ , ಪೀರಸಾಬ ಲೋಕಾಪೂರ , ಶಬ್ಬೀರ ಚಿನ್ನಾಪೂರ , ಜಾಕೀರ ನದಾಫ , ಗೌಸ ನದಾಫ ಸೇರಿದಂತೆ ಅನೇಕರು ಇದ್ದರು.

Related posts: