RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸಿ ಕಬ್ಬು ಬೆಳೆಗಾರರ ಅಭಿವೃದ್ಧಿಗೆ ಶ್ರಮಿಸಲಾಗುವುದು : ಅಶೋಕ ಪಾಟೀಲ

ಗೋಕಾಕ:ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸಿ ಕಬ್ಬು ಬೆಳೆಗಾರರ ಅಭಿವೃದ್ಧಿಗೆ ಶ್ರಮಿಸಲಾಗುವುದು : ಅಶೋಕ ಪಾಟೀಲ 

ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸಿ ಕಬ್ಬು ಬೆಳೆಗಾರರ ಅಭಿವೃದ್ಧಿಗೆ ಶ್ರಮಿಸಲಾಗುವುದು : ಅಶೋಕ ಪಾಟೀಲ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 29 :

 
ಕಬ್ಬು ಬೆಳೆಗಾರರಿಗೆ ಹಲವಾರು ವಿಶೇಷ ತರಬೇತಿಗಳ ಮೂಲಕ ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸಿ ಅವರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಪ್ರಭಾ ಶುಗರ್ ಅಧ್ಯಕ್ಷ ಹಾಗೂ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಉಪಾಧ್ಯಕ್ಷ ಅಶೋಕ ಪಾಟೀಲ ಹೇಳಿದರು.

ಶನಿವಾರದಂದು ಇಲ್ಲಿಯ ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಯ ಆಡಳಿತ ಮಂಡಳಿಯವರು ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ತ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು

ಜಾರಕಿಹೊಳಿ ಸಹೋದರರ ಆರ್ಶಿವಾದದಿಂದ ನನಗೆ ಈ ಹುದ್ದೆ ದೊರೆತಿದೆ. ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯಿಂದ ಸಿಗುವ ಸೌಲಭ್ಯಗಳನ್ನು ಕಬ್ಬು ಬೆಳೆಗಾರರಿಗೆ ಕಲ್ಪಿಸಿ ಅವರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಬೆಳೆತಜ್ಞ ಎನ್ ಆರ್ ಏಕ್ಕೂಂಡಿ ಮಾತನಾಡಿ ಸಂಸ್ಥೆಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ನೀಡುವ ಕಬ್ಬಿನ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಸಿ18024 ಹಾಗೂ ಸಿ 09004 ತಳ್ಳಿಗಳು ರೋಗ ನಿರೋಧಕ ಶಕ್ತಿಯೊಂದಿಗೆ ಹೆಚ್ಚಿನ ಇಳುವರಿ ಕೊಡುತ್ತವೆ. ಹಿಡಕಲ್ ಡ್ಯಾಂ ಸಮಿಪದ ಯರಗಟ್ಟಿಯಲ್ಲಿ ಈ ಬೀಜಗಳು ದೊರೆಯುತ್ತಿದ್ದು, ರೈತಭಾಂಧವರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ, ನಿರ್ದೇಶಕರುಗಳಾದ ಬಸಗೌಡ ಪಾಟೀಲ, ಶಿವಲಿಂಗ ಪೂಜೇರಿ, ಕೃಷ್ಣಪ್ಪ ಬಂಡ್ರೋಳಿ, ಕೆಂಚನಗೌಡಾ ಪಾಟೀಲ, ಸಿದ್ದಲಿಂಗಪ್ಪ ಕಂಬಳಿ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್ ಮಂಟೂರ , ಕಬ್ಬು ಅಭಿವೃದ್ಧಿ ಅಧಿಕಾರಿ ಜೆ.ಆರ್.ಬಬಲೇಶ್ವರ , ಗಣ್ಯರಾದ ವಿಕ್ರಂ ಅಂಗಡಿ , ಸೈದಪ್ಪ ಗದಾಡಿ ಸೇರಿದಂತೆ ಅನೇಕರು ಇದ್ದರು.

Related posts: