RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮತ್ತು ತಂಡದ ಅಭಿವೃದ್ಧಿ ಜಪ ಕೇವಲ ಡಿ. 5 ವರೆಗೆ ಮಾತ್ರ : ಕೈ ಅಭ್ಯರ್ಥಿ ಲಖನ್

ಗೋಕಾಕ:ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮತ್ತು ತಂಡದ ಅಭಿವೃದ್ಧಿ ಜಪ ಕೇವಲ ಡಿ. 5 ವರೆಗೆ ಮಾತ್ರ : ಕೈ ಅಭ್ಯರ್ಥಿ ಲಖನ್ 

ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮತ್ತು ತಂಡದ ಅಭಿವೃದ್ಧಿ ಜಪ ಕೇವಲ ಡಿ. 5 ವರೆಗೆ ಮಾತ್ರ : ಕೈ ಅಭ್ಯರ್ಥಿ ಲಖನ್

 

 

ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ನ, 23 :-

 

 
ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮತ್ತು ತಂಡದ ಅಭಿವೃದ್ಧಿ ಜಪ ಕೇವಲ ಡಿ. 5 ವರೆಗೆ ಮಾತ್ರ, ಹೀಗಾಗಿ ಅವರ ಮಾತುಗಳಿಗೆ ಮರಳಾಗದೆ ಕಾಂಗ್ರೆಸ್ ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಹಮ್ಮಿಕೊಂಡ ಸ್ಥಳೀಯ ಮತದಾರರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಹೋರಾಟ ಕಾಂಗ್ರೆಸ್-ಬಿಜೆಪಿ ಅಲ್ಲ, ಕ್ಷೇತ್ರದ ಸ್ಥಳಿಯ ಕ್ಷೇತ್ರದ ಸುಧಾರಣೆಗಾಗಿ ನಮ್ಮ ಹೋರಾಟ ಎಂದರು.
ನಮ್ಮ ಸ್ಥಳಿಯ ಸಮಸ್ಯೆಗಳೆಂದರೆ ಮಾವ ಅಳಿಯ ಮತ್ತು ಅವರ ತಂಡ, ಇವರನ್ನು ಓಡಿಸಿದಾಗ ಮಾತ್ರ ಗೋಕಾಕ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ. ರಮೇಶ ಹಿಂಬಾಲಕರಾದ ನಾಲ್ಕು ಜನ ನಗರಸಭೆ ಸದಸ್ಯರು ಅವರಿಗಿಂತ ಹೆಚ್ಚು ಓಡಾಡಿ ಪ್ರಚಾರ ಮಾಡುತ್ತಿದ್ದಾರೆ. ಏಕೆಂದರೆ ನಾಳೆ ನಾನು ಶಾಸಕನಾದರೆ ಅವರ ಅಭಿವೃದ್ಧಿ ಕುಂಠಿತವಾಗುತ್ತೆ. ಹೀಗಾಗಿ ಅವರ ಮಾತುಗಳಿಗೆ ಮರಳಾಗಬೇಡಿ. 31 ವಾರ್ಡ್ ಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.
ಗೋಕಾಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸತೀಶ ಜಾರಕಿಹೊಳಿ ಅವರ ಕೈ ಬಲಪಡಿಸಬೇಕಾಗಿದೆ. ಬೆಳಗಾವಿ ಬಿಟ್ಟರೆ ಹೆಚ್ಚು ಅಭಿವೃದ್ಧಿಯಾಗಿದೆ ಎಂದರೆ ಸತೀಶ ಅವರ ಕ್ಷೇತ್ರ ಯಮಕನಮರಡಿ. ಗೋಕಾಕ ಕ್ಷೇತ್ರವನ್ನು ಮುಂದೆ ಹೇಗೆ ಅಭಿವೃದ್ಧಿಪಥ ದತ್ತ ಒಯ್ಯಬೇಕು ಎಂದು ಈಗಲೇ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಯೋಜನೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಮತದಾರರ ಸಹಕಾರ ಅಗತ್ಯ ಎಂದರು.
ನಗರದಲ್ಲಿ ಮಾಸ್ಟರ್ ಪ್ಲಾನ್ ಜಾರಿಯಾಗಿ 5 ವರ್ಷ ಕಳೆದಿವೆ. ಗೋಕಾಕ ವ್ಯಾಪಾರಸ್ಥರು ದಿನಪ್ರತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಧೂಳಿನಿಂದ ಜನರ ಆರೋಗ್ಯ ಹಾಳಾಗಿ ಹೋಗಿದೆ. ನಗರಸಭೆಯಲ್ಲಿ ಭ್ರಷ್ಠಾಚಾರ ತಾಂಡವವಾಡುತ್ತಿದೆ. ನೀರಿನ ಸಮಸ್ಯೆ ಸೇರಿ ವಿವಿಧ ಮೂಲಭೂತ ಸೌಲಭ್ಯಗಳು ನಗರದಲ್ಲಿ ತಲೆದೂರಿವೆ. 25 ವರ್ಷ ಕಳೆದರೂ ನಾವು ಇಂತಹ ಸಮಸ್ಯೆಗಳ ಬಗ್ಗೆ ಮಾತಾಡುವುದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗೋಕಾಕ ಅಭೀವೃದ್ಧಿಯಾಗಬೇಕೆಂದರೆ ರಮೇಶ ಮತ್ತು ಬಟಾಲಿಯನನನ್ನು ಓಡಿಸಲೆಬೇಕು. ಈಗ ಚುನಾವಣೆ ಇರುವುದರಿಂದ ಮತದಾರರನ್ನು ಒಳಗೆ ಬಾ ಎಂಬ ಬೋರ್ಡ್ ಹಾಕಿ ಮತದಾನದ ಬಳಿಕ ನಾಳೆ ಬಾ ಎಂದು ಜಪ ಮಾಡುತ್ತಾರೆ. ಶಾಸಕರನ್ನು ಭೇಟಿಯಾಗಬೇಕೆಂದರೆ 6 ತಿಂಗಳು ಅವರೇ ಕಾಯಬೇಕು.ಇಂತಹದರಲ್ಲಿ ನಿಮ್ಮ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ಎಂದು ಪ್ರಶ್ನಿಸಿದರು.
ಶಾಸಕ ಸತೀಶ ಜಾರಕಿಹೊಳಿ, ಜಾವೇದ್ ಗೋಕಾಕ, ಭಗವಂತ ಹುಳ್ಳಿ, ವಿವೇಕ ಜತ್ತಿ, ವಿಜಯ ಜತ್ತಿ, ಮುರಾರಿ, ಬಸವರಾಜ ಸಾಯನ್ನವರ, ಬಸವರಾಜ ದೇಶನೂರ, ಜಾಕೀರ ನದಾಫ, ಅಕ್ಬರ್ ಜಮಾದಾರ್, ಇಲಾಹಿ ಖೈರದಿ, ಮುನ್ನಾ ಖತಿಬ್, ಆರೀಫ್ ಪೀರಜಾದೆ, ಕಲ್ಪನಾ ಜೋಷಿ ಸೇರಿ ಇತರರು ಇದ್ದರು.

Related posts: