ಹುಕ್ಕೇರಿ:ಗೌರಿ ಲಂಕೇಶರ ಚಿಂತನೆ ಮತ್ತು ಹೋರಾಟವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ : ಮಾಜಿ ಸಚಿವ ಸತೀಶ
ಗೌರಿ ಲಂಕೇಶರ ಚಿಂತನೆ ಮತ್ತು ಹೋರಾಟವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ : ಮಾಜಿ ಸಚಿವ ಸತೀಶ
ಹುಕ್ಕೇರಿ ಸೆ 6: ವಿಚಾರವಾದಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಸುದ್ದಿ ತಿಳಿದು ದಿಗ್ಬ್ರಮೆಯಾಗಿದೆ ಗೌರಿ ಲಂಕೇಶ ಅವರ ಚಿಂತನೆ ಮತ್ತು ಹೋರಾಟಗಳನ್ನು ನಾನು ಪ್ರಾಮಾಣಿಕವಾಗಿ ಮುನ್ನಡೆಸಿಕೊಂಡು ಹೊಗುತ್ತೆನೆಂದು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹೇಳಿದರು
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಗತಿಪರ ಚಿಂತಕರು, ಕೋಮುವಾದ ಹೋರಾಟದ ಬಲಿಷ್ಠ ನಾಯಕಿಯನ್ನು ಕಳೆದುಕೊಂಡಿದ್ದು ಅತೀವ ದುಃಖ ತಂದಿದೆ. ಗೌರಿ ಅವರ ಹತ್ಯೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ಅವರ ಜೊತೆಗೆ ಕಾರ್ಯ ನಿರ್ವಹಿಸಿದ ಅನುಭವ ಇದ್ದು, ಅವರ ಚಿಂತನೆಗಳನ್ನು ಹಾಗೂ ಹೋರಾಟವನ್ನು ಮುನ್ನೆಡೆಸಿಕೊಂಡು ಹೋಗುತ್ತೇನೆ.
ಕಲಬುರಗಿ ಹತ್ಯೆ ತನಿಖೆಯಲ್ಲಿ ಸರ್ಕಾರ ವಿಫಲವಾಗಿಲ್ಲ, ವಿಳಂಬವಾಗಿದೆ ಎಂದ ಅವರು ಇಂದಲ್ಲ ನಾಳೆ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಗೌರಿ ಲಂಕೇಶ್ ಹತ್ಯೆ ಹಿಂದೆ ಮನುವಾದಿಗಳ ಕೈವಾಡವಿದ್ದು, ಕಲಬುರಗಿ ಹತ್ಯೆ ಹಿಂದೆ ಇರುವ ಶಕ್ತಿಗಳೇ ಗೌರಿ ಲಂಕೇಶ್ ಅವರ ಹತ್ಯೆ ಹಿಂದೆ ಕಾರ್ಯ ನಿರ್ವಹಿಸಿವೆ ಎಂದು ಸಂಶಯ ವ್ಯಕ್ತಪಡಿಸಿದರು.