RNI NO. KARKAN/2006/27779|Sunday, July 13, 2025
You are here: Home » breaking news » ಘಟಪ್ರಭಾ:ನವಿಲಮಾಳ ಹತ್ತಿರ ಸರಕಾರಿ ಗೈರಾಣ ಭೂಮಿ ಅತೀಕ್ರಮಣ ತೆರವು

ಘಟಪ್ರಭಾ:ನವಿಲಮಾಳ ಹತ್ತಿರ ಸರಕಾರಿ ಗೈರಾಣ ಭೂಮಿ ಅತೀಕ್ರಮಣ ತೆರವು 

ನವಿಲಮಾಳ ಹತ್ತಿರ ಸರಕಾರಿ ಗೈರಾಣ ಭೂಮಿ ಅತೀಕ್ರಮಣ ತೆರವು

 

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 17 :

 
ದುಪಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನವಿಲಮಾಳ ಹತ್ತಿರ ಸರಕಾರಿ ಗೈರಾಣ ಭೂಮಿಯನ್ನು ಅತೀಕ್ರಮಣ ಮಾಡಿಕೊಂಡವರಿಂದ ಮಂಗಳವಾರ ಗೋಕಾಕ ತಾಲೂಕ ದಂಡಾಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಸರ್ವೇ ನಂ.173/1/ಬಿ 10 ಎಕರೆ ಪ್ರದೇಶದಲ್ಲಿ ನೂರಾರು ಅಧಿಕೃತ ಮನೆಗಳು ಕಳೆದ ನಾಲ್ಕೈದು ತಿಂಗಳಿನಿಂದ ತಲೆ ಎತ್ತಿದ್ದು ಅಧಿಕಾರಿಗಳು ತಿಳಿಸಿದರು ನಿರ್ಲಕ್ಷ ಮಾಡಿ ಮನೆ ಕಟ್ಟಲಾಗುತ್ತಿತ್ತು. ಇಂದು ಗೋಕಾಕ ತಹಶಿಲ್ದಾರ ಪ್ರಕಾಶ ಹೊಳೆಯಪ್ಪಗೋಳ ಮತ್ತು ಕಂದಾಯ ನೀರಿಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕರಿಗಳು ಸೇರಿ ಪೋಲಿಸ್ ಬಂದೋಬಸ್ತನಲ್ಲಿ ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಅತಿಕ್ರಮಣಕಾರರಿಂದ ತುಂಬಾ ಅಡಚಣೆ, ಬೆದರಿಕೆಗಳು ಬಂದರು ಅಧಿಕಾರಿಗಳು ಲೆಕ್ಕಿಸಿದೆ ತೆರವುಗೊಳಿಸಿದರು. ಅತಿಕ್ರಮಣಕಾರರ ಗೋಳಾಟ, ಚೀರಾಟ ತುಂಬಾ ನಡೆಯಿತು. ಓರ್ವ ಯುವಕ ಕಲ್ಲು ಎತ್ತಿಕೊಂಡು ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಎಸ್‍ಐ ಮೇಲೆ ಹಲ್ಲೆಗೆ ಮುಂದಾದಾಗ ಅತನನ್ನು ಪೋಲಿಸರು ತಡೆದು ವಶಕ್ಕೆ ಪಡೆದುಕೊಂಡರು.
ಶಾಪ ಹಾಕಿದ ಲಕ್ಕವ್ವ:- ಅತಿಕ್ರಮಣಕಾರರಲ್ಲಿ ಓರ್ವ ಮಹಿಳೆ ನನ್ನ ಮೇಲೆ ಗೋಕಾಕ ಲಕ್ಕವ್ವ ದೇವಿ ಬರುತ್ತಾಳೆ ನಿಮ್ಮನ್ನೆಲ್ಲ ಬಿಡಲ್ಲ ಎಂದು ತೆರವುಗೊಳಿಸುವರ ಮೇಲೆ ಮೈಮೇಲೆ ಏನೋ ಬಂದಂತೆ ವರ್ತಿಸಿ ಎಲ್ಲರ ಮುಂದೆ ರಂಪಾಟ ಮಾಡಿ ಗಮನ ಸೆಳೆದಳು.
50ಕ್ಕೂ ಹೆಚ್ಚು ನಿರ್ಮಾಣಕ್ಕೆ ಪ್ರಾರಂಭಗೊಂಡ ಮನೆಗಳ ತೆರವು ಮಾಡಿದರೆ, 10 ತಗಡಿನ ಶೆಡ್ಡು ಹಾಗೂ 18 ಸಂಪೂರ್ಣ ನಿರ್ಮಾಣಗೊಂಡ ಮನೆಗಳನ್ನು ತೆರವುಗೊಳಿಸಲಾಯಿತು. ಹಾಗೂ 32 ಮನೆಯಲ್ಲಿ ಜನರು ವಾಸವಿದ್ದ ಕಾರಣ ಅವರಿಗೆ ಮನೆ ತೆರವು ಮಾಡಲು ಅಧಿಕಾರಿಗಳು ಕೆಲವು ದಿನಗಳ ಅವಕಾಶ ಕಲ್ಪಿಸಿದರು.
ನಿರ್ಮಾಣ ಹಂತದಲ್ಲಿ ಇರುವ ಹಾಗೂ ನಿರ್ಮಾಣಗೊಂಡು ವಾಸವಿಲ್ಲದೆ ಇರುವ ಎಲ್ಲಾ ಕಟ್ಟಡಗಳನ್ನು ನಾಶ ಮಾಡುತ್ತೇವೆ. ವಾಸ್ತವ್ಯದಲ್ಲಿ ಇದ್ದ ಕೆಲವು ಮನೆಯವರಿಗೆ ಮನೆ ಖಾಲಿ ಮಾಡಲು ಸ್ವಲ್ಪ ದಿನದ ಅವಕಾಶ ನೀಡುತ್ತೇವೆ. ಅದಕ್ಕೆ ಅವರು ಒಪ್ಪದಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ನಮ್ಮ ಸರಕಾರಿ ಭೂಮಿಯನ್ನು ನಮ್ಮ ವಶಕ್ಕೆ ಪಡೆಯುತ್ತೇವೆ. ಹಾಗೂ ಯಾರಾರದರು ಸ್ಥಳೀಯ ಜನ ನಾಯಕರು ಈ ಜಾಗದಲ್ಲಿ ಅವರಿಗೆ ಮನೆ ಕಟ್ಟಲು ಜಾಗ ನೀಡುತ್ತೇವೆ ಎಂದು ಹಣ ಪಡೆದುಕೊಂಡಿದ್ದರೆ ಅದರ ಬಗ್ಗೆ ಸಾಕ್ಷಿ ಸಮೇತ ದೂರು ಸಲ್ಲಿಸಿದರೆ ಅಂತಹ ಆರೋಪಿಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಗೋಕಾಕ ತಾಲೂಕ ದಂಡಾಧಿಕಾರಿ ಪ್ರಕಾಶ ಹೊಳೆಯಪ್ಪಗೋಳ ಪತ್ರಿಕೆಗೆ ತಿಳಿಸಿದರು.
ತೆರವು ಕಾರ್ಯಾಚರಣೆಯಲ್ಲಿ ಉಪ ತಹಶಿಲ್ದಾರ ಎಲ್.ಹೆಚ್ ಬೋವಿ, ಕಂದಾಯ ನಿರೀಕ್ಷಕರಾದ ಎಸ್.ಎನ್.ಹಿರೇಮಠ, ಅರಬಾವಿ ಕಂದಾಯ ನಿರೀಕ್ಷಕರಾದ ಹೊಸಮನಿ, ದುಪಧಾಳ ಗ್ರಾಮ ಲೆಕ್ಕಾಧಿಕಾರಿಗಳಾದ ಎನ್.ಎಸ್.ಗಡಕರಿ, ದುಪಧಾಳ ಗ್ರಾಮ ಪಂಚಾಯತ್ ಪಿಡಿಓ ಕೆ.ಎಸ್.ಗೋವಿಲಕರ ಹಾಗೂ ಘಟಪ್ರಭಾ ಪಿಎಸ್‍ಐ ಹಾಲಪ್ಪ ಬಾಲದಂಡಿ, ಎಸ್.ಆರ್ ಖೋತ ಹಾಗೂ ಸಿಬ್ಬಂದಿ ವರ್ಗ ಹಾಗೂ ಗೋಕಾಕ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

Related posts: