RNI NO. KARKAN/2006/27779|Thursday, May 16, 2024
You are here: Home » breaking news » ಗೋಕಾಕ:ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಿಸಲು ಅನುಮತಿ ನೀಡದಂತೆ ಕರವೇ ಪ್ರತಿಭಟನೆ

ಗೋಕಾಕ:ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಿಸಲು ಅನುಮತಿ ನೀಡದಂತೆ ಕರವೇ ಪ್ರತಿಭಟನೆ 

ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಿಸಲು ಅನುಮತಿ ನೀಡದಂತೆ ಕರವೇ ಪ್ರತಿಭಟನೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :

 

ನಾಡ ವಿರೋಧಿ ಸಂಘಟನೆ ಎಂಇಎಸ್ ನಡೆಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ಶನಿವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ಎಂಇಎಸ್ ಸಂಘಟನೆಯ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಕಳೆದ ಹಲವಾರು ವರ್ಷಗಳಿಂದ ಕನ್ನಡಿಗರು ಕನ್ನಡ ರಾಜೋತ್ಸವ ಆಚರಿಸುವ ಸಂದರ್ಭದಲ್ಲಿ ನಾಡ ವಿರೋಧಿ ಎಂಇಎಸ್ ಸಂಘಟನೆಯವರು ಕರಾಳ ದಿನಾಚರಣೆ ಆಚರಿಸುವುದು ತರವಲ್ಲ . ಈ ಬಾರಿ ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಣೆ ಮಾಡಲು ಸರಕಾರ ಜಿಲ್ಲಾಡಳಿತ ಅನುಮತಿ ನೀಡಬಾರದೆಂದು ಖಾನಪ್ಪನವರ ಆಗ್ರಹಿಸಿದರು

ಈ ಸಂದರ್ಭದಲ್ಲಿ ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ಶೆಟ್ಟೆಪ್ಪಾ ಗಾಡಿವಡ್ಡರ, ಮುಗುಟ ಪೈಲ್ವಾನ್ , ಅಶೋಕ ಬಂಡಿವಡ್ಡರ , ನಿಜಾಮ ನಧಾಪ , ರಮೇಶ ಕಮತಿ , ರಾಮ ಕುಡೆಮ್ಮಿ , ಮಂಜುನಾಥ ಪ್ರಭುನಟ್ಟಿ , ಯಲ್ಲಪ್ಪಾ ಧರ್ಮಟ್ಟಿ , ಶಂಕರಲಿಂಗ ಗಾಡಿವಡ್ಡರ , ಮಾರುತಿ ಗಾಡಿವಡ್ಡರ , ಶಂಕರ ಗಾಡಿವಡ್ಡರ , ರಾಜೇಂದ್ರ ಕೆಂಚನಗುಡ್ಡ , ಮಹಾಂತೇಶ ಹಿರೇಮಠ , ಸತ್ತಾರ ಬೇಪಾರಿ , ವಿಠ್ಠಲ ಹಂಜಿ , ಪ್ರತೀಕ ಪಾಟೀಲ , ಸಂತೋಷ ಕೋಲಕಾರ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: