RNI NO. KARKAN/2006/27779|Friday, March 29, 2024
You are here: Home » breaking news » ಗೋಕಾಕ:ಶಿಕ್ಷಣದಿಂದ ಸಮಾಜಗಳ ಅಭಿವೃದ್ಧಿ ಸಾಧ್ಯ: ಪುಂಡಲೀಕ ಅನವಾಲ

ಗೋಕಾಕ:ಶಿಕ್ಷಣದಿಂದ ಸಮಾಜಗಳ ಅಭಿವೃದ್ಧಿ ಸಾಧ್ಯ: ಪುಂಡಲೀಕ ಅನವಾಲ 

ಶಿಕ್ಷಣದಿಂದ ಸಮಾಜಗಳ  ಅಭಿವೃದ್ಧಿ ಸಾಧ್ಯ: ಪುಂಡಲೀಕ ಅನವಾಲ
ಗೋಕಾಕ ಸೆ 3: ಹಿಂದುಳಿದ ಸಮಾಜಗಳ ಅಭಿವೃದ್ದಿಯಾಗಬೇಕಾದರೇ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಬೆಳಗಾವಿ ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ ಹೇಳಿದರು.

ಭಾನುವಾರದಂದು ನಗರದ ಶ್ರೀ ಬೀರೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾ ಯುವ ಘಟಕದ ಆಶ್ರಯದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಾ 219ನೇ ಜಯಂತಿ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ದಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಉಪಯೋಗದಿಂದ ಶೈಕ್ಷಣಿಕ ಪ್ರಗತಿ ಹೊಂದಬೇಕು. ಹಿಂದುಳಿದ ಜನಾಂಗದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅದರಿಂದ ಹಿಂದುಳಿದವರಲ್ಲಿ ಜಾಗೃತಿ ಉಂಟಾಗುತ್ತದೆ. ಆಗ ಹಿಂದುಳಿದ ಜನಾಂಗದವರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಯ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಾ 219ನೇ ಜಯಂತಿ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಲುಮತದ ಪ್ರತಿಭೆ ಪುರಸ್ಕಾರ ನೀಡಿ ಸತ್ಕರಿಸುತ್ತಿರುವುದು.

ಕೆಎಲ್‍ಇ ಆಸ್ಪತ್ರೆಯ ಸರ್ಜನ್ ಡಾ|| ಜಗದೀಶ ಸೂರಣ್ಣವರ ಮಾತನಾಡಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಅದ್ಬುತವಾದ ಶೈಕ್ಷಣಿಕ ಪ್ರತಿಭೆಗಳಿದ್ದು, ಅವರಿಗೆ ಸೂಕ್ತವಾದ ಮಾರ್ಗದರ್ಶನದ ಕೊರತೆ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರು ನಾಡನ್ನು ಬೆಳಗುತ್ತಾರೆ. ಇದಕ್ಕಾಗಿ ಸಮಾಜದ ಹಿರಿಯರ ಮಾರ್ಗದರ್ಶನ ಪಡೆದು ಯುವಕರು ಶ್ರಮ ವಹಿಸಿ ಕಾರ್ಯನಿರ್ವಹಿಸಿಬೇಕೆಂದು ತಿಳಿಸಿದರು.

ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಇದೇ ಸಂದರ್ಭ 2016-17ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಲುಮತದ ಪ್ರತಿಭೆ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಅಧ್ಯಕ್ಷತೆಯನ್ನು ಕುರುಬರ ಸಂಘದ ತಾಲೂಕಾಧ್ಯಕ್ಷ ಸಿದ್ದಲಿಂಗ ದಳವಾಯಿ ವಹಿಸಿದ್ದರು. ಕವಲಗುಡ್ಡದ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ವೇದಿಕೆ ಮೇಲೆ ನ್ಯಾಯವಾದಿ ವಿಠ್ಠಲ ಚಂದರಗಿ, ಮಂಜುನಾಥ ಸಣ್ಣಕ್ಕಿ, ನಗರಸಭೆ ಸದಸ್ಯರಾದ ಎಸ್.ಎ.ಕೊತವಾಲ, ಸಿದ್ದಪ್ಪ ಹುಚ್ಚರಾಮಗೋಳ, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್.ತಡಸಲೂರ, ಮುಖಂಡರಾದ ಬಸವಂತ ಕಮತಿ, ರಾಮಕೃಷ್ಣ ತುರಾಯಿ, ಕೆಂಚಪ್ಪ ಗೌಡಪ್ಪಗೋಳ, ಪುಂಡಲೀಕ ಮೇಟಿ, ಡಾ|| ಎಸ್.ಎಸ್.ಪಾಟೀಲ, ಕರೆಪ್ಪ ಕಡ್ಡಿ, ಬೀರಪ್ಪ ದುರ್ಗಿಪೂಜೇರಿ, ಕರೆಪ್ಪ ಸೂರಣ್ಣವರ ಇದ್ದರು.
ಪ್ರಮೋದ ಯತ್ತಿನಮನಿ ಸ್ವಾಗತಿಸಿದರು. ನ್ಯಾಯವಾದಿ ಬಲದೇವ ಸಣ್ಣಕ್ಕಿ ನಿರೂಪಿಸಿದರು. ಕಾಶಿನಾಥ ಸವಸುದ್ದಿ ವಂದಿಸಿದರು.

Related posts: