ಖಾನಾಪೂರ :ಉತ್ತಮ ಶುಗರ್ಸ ಹೆಸರಿನಲ್ಲಿ ಖರೀದಿಸಿದ ರೈತರ ಭೂಮಿಯನ್ನು ಮರಳಿಸುವಂತೆ ಕರವೇ ಮನವಿ
ಉತ್ತಮ ಶುಗರ್ಸ ಹೆಸರಿನಲ್ಲಿ ಖರೀದಿಸಿದ ರೈತರ ಭೂಮಿಯನ್ನು ಮರಳಿಸುವಂತೆ ಕರವೇ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಖಾನಾಪೂರ ಸೆ 19 :
ಉತ್ತಮ ಶುಗರ್ಸ ಹೆಸರಿನಲ್ಲಿ ಮೋಸ ಮಾಡಿ ರೈತರ ಜಮೀನು ಖರೀದಿಸಿದ್ದು, ಅದನ್ನು ಮರಳಿ ರೈತರಿಗೆ ಹಸ್ತಾಂತರಿಸಲು ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿದರು.
ಶನವಾರದಂದು ನಗರದ ಮಿನಿ ವಿಧಾನಸೌಧದಲ್ಲಿ ಸೇರಿದ ಕರವೇ ಕಾರ್ಯಕರ್ತರು ತಹಶೀಲ್ದಾರ ಮುಖಾಂತರ ಕಂದಾಯ ಸಚಿವರಿಗೆ ಮನವಿ ಅರ್ಪಿಸಿದರು
ಖಾನಾಪುರ ತಾಲೂಕಿನ ಮಂಗೇನಕೊಪ್ಪ ಗ್ರಾಮದ ರೈತರಿಂದ ಕಳೆದ 13, 14 ವರ್ಷಗಳ ಹಿಂದೆ ಉತ್ತಮ ಶುಗರ್ಸ್ ಎಂಬ ಕಂಪನಿಯವರು ಅತ್ಯಂತ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಿ ಅಲ್ಲಿ ಕೇವಲ ಎರಡು ಮೂರು ವರ್ಷಗಳಲ್ಲಿ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಿ ಭೂಮಿಯನ್ನು ಕೊಟ್ಟ ರೈತರಿಗೆ ನೌಕರಿ ಕೊಡುವ ಭರವಸೆ ನೀಡಿ ರೈತರಿಂದ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಿದ್ದರು ಆದರೆ ಕಳೆದ ಹದಿನಾಲ್ಕು ವರ್ಷಗಳಿಂದ ಸಕ್ಕರೆ ಕಾರಖಾನೆ ತರೆಯದೆ ಅದನ್ನು ಈಗ ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇದು ರೈತರಿಗೆ ಮಾಡಿದ ಮೊಸವಾಗಿದೆ
ಇದರಿಂದ ರೈತರು ಇತ್ತ ಭೂಮಿಯು ಇಲ್ಲದೇ ಅತ್ತ ಉದ್ಯೋಗವು ಇಲ್ಲದೇ ರೈತರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಭೂಮಿಯನ್ನು ಅವರಿಗೆ ಮರಳಿ ಕೊಡಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಮನವಿಯಲ್ಲಿ ಆಗ್ರಹಿಸಿದ್ದಾರೆ
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಆರೋಗ್ಯಪ್ಪ ಪಾದನಕಟ್ಟಿ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ ಉಪಾಧ್ಯಕ್ಷರಾದ ವಿಠ್ಠಲ ಹಿಂಡಲಕರ ತಾಲೂಕಾ ಸಂಚಾಲಕರಾದ ಜಯವಂತ ನಿಡಗಲ್ಕರ ದತ್ತಾತ್ರಯ್ಯ ಪೂಜಾರ ಮಲ್ಲಿಕಾರ್ಜುನ ಹೊಸೂರಿ ದಿಗಂಬರ ನಾಯಕ ಬಸವರಾಜ ಬಡಿಗೇರ ತಮ್ಮನ್ನಾ ಗವನಾಳಿ ಮಹಾಂತೇಶ ಚವ್ಹಾನ ಫಕ್ಕೀರ ಹಿಂಡಲಕರ ಹನಮಂತ ಪಣಸೂಡಕರ ಮುಂತಾದವರು ಉಪಸ್ಥಿತರಿದ್ದರು