ಘಟಪ್ರಭಾ:ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 21 :
ಸಮೀಪದ ಧುಪದಾಳ ಗ್ರಾಮದಲ್ಲಿ ಸನ್ 2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಉತ್ತಮ ಅಂಕ ಪಡೆದು ಗೋಕಾಕ ಶೈಕ್ಷಣಿಕ ವಲಯದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಘಟಕ ಅಧ್ಯಕ್ಷ ಶೆಟ್ಟೆಪ್ಪ ಗಾಡಿವಡ್ಡರ, ಕಳೆದ ಅನೇಕ ವರ್ಷಗಳಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಉತ್ತಮ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ಸನ್ಮಾನಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಶಂಸೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸುವದಾಗಿ ಘೋಷಿಸಿದರು.
ಎಸ್.ಎಸ್.ಎಲ್.ಸಿ, ಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮದ ವಿದ್ಯಾರ್ಥಿಗಳಾದ ಶೃತಿ ಬ.ಪಾಟೀಲ, ವಿವೇಕ ಸು.ಲೋಕೆಕರ, ದೀಪಾ ಸಿ.ಕಟ್ಟಿಮನಿ, ಮಹಾಲಕ್ಷ್ಮೀ ಲ.ದೊಡಮನಿ, ಲಕ್ಷ್ಮೀ ರಾ. ಮಲ್ಲಾಪೂರ, ಬಸವರಾಜ ಸು. ಮೇಕಲಮರಡಿ, ಸಾಗರ ರಜಪೂತ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿ.ಆರ್.ಪಿ ರಮೇಶ ಕೋಲಕಾರ, ಹಿರಿಯರಾದ ಅಶೋಕ ಬಾಳಿಕಾಯಿ, ರಾಮಪ್ಪ ದೊಡ್ಡನ್ನವರ, ಕರಣಸಿಂಘ ರಜಪೂತ, ಚಂದ್ರಕಾಂತ ಗಾಡಿವಡ್ಡರ, ಶಂಕರ ಗಾಡಿವಡ್ಡರ, ರಾಜು ದೊಡಮನಿ, ಯಮನೂರ ಗಾಡಿವಡ್ಡರ, ವಿನೋದ ಮೇತ್ರಿ, ಸುನೀಲ ಕೊಟಬಾಗಿ, ಪ್ರಕಾಶ ನಡಗೇರಿ ಸೇರಿದಂತೆ ಅನೇಕರು ಇದ್ದರು.