ಹಿಡಕಲ್ ಡ್ಯಾಂ : ಎಲ್.ಡಿ.ಎಸ್ ಸ್ಟುಡಿಯೋ ವತಿಯಿಂದ ಡ್ಯಾಂನ ವೃದ್ರಾಶ್ರಮದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ
ಎಲ್.ಡಿ.ಎಸ್ ಸ್ಟುಡಿಯೋ ವತಿಯಿಂದ ಡ್ಯಾಂನ ವೃದ್ರಾಶ್ರಮದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ ,ಹಿಡಕಲ್ ಡ್ಯಾಂ ಅ 19 :
181 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಗೋಕಾಕಿನ ಎಲ್.ಡಿ.ಎಸ್ ಸ್ಟುಡಿಯೋ ಹಾಗೂ ಗೆಳೆಯರ ಬಳಗದ ವತಿಯಿಂದ ಇಲ್ಲಿಯ ಸಂಕಲ್ಪ ವೃದ್ರಾಶ್ರದ ವೃದ್ದರಿಗೆ ಹೊದಿಕೆ , ಮಾಸ್ಕ ಹಾಗೂ ಮಾಫಲರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಸಾದಿಕ ಹಲ್ಯಾಳ ನೊಂದವರ, ಬಡವರ ಕಣ್ಣಿರೊರೆಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಅಂದಾಗ ಮಾತ್ರ ಸಮಾಜದಲ್ಲಿ ನೊಂದವರು , ಬಡವರು ಧೈರ್ಯದಿಂದ ಬದುಕಲು ಸಾಧ್ಯ . ಆ ನಿಟ್ಟಿನಲ್ಲಿ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿರುವ ಗೋಕಾಕನ ಎಲ್.ಡಿ.ಎಸ್ ಸ್ಟುಡಿಯೋದವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ವೃದ್ರಾಶ್ರಮದ ಮೇಲ್ವಿಚಾರಕ ಅಪ್ಪುರಾಜ ಗುರಕನವರ , ಗುರು ಯಮಕನಮರಡಿ , ಮುಗುಟ ಪೈಲವಾನ, ಪತ್ರಕರ್ತ ರಮೇಶ ನಾಯಿಕ , ಯಾಸೀನ ಮುಲ್ಲಾ , ಮಲ್ಲಿಕಾರ್ಜುನ ಭೂತಿ, ಶ್ರೀಮತಿ ಪುಷ್ಪಾ ಸಾತನವರ ಉಪಸ್ಥಿತರಿದ್ದರು