RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘಟನೆಯಿಂದ ಸಚಿವ ರಮೇಶ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ : ತಹಶೀಲ್ದಾರ ಅವರಿಗೆ ಮನವಿ

ಗೋಕಾಕ:ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘಟನೆಯಿಂದ ಸಚಿವ ರಮೇಶ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ : ತಹಶೀಲ್ದಾರ ಅವರಿಗೆ ಮನವಿ 

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘಟನೆಯಿಂದ ಸಚಿವ ರಮೇಶ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ : ತಹಶೀಲ್ದಾರ ಅವರಿಗೆ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 13 :

 

 

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಪ್ರತಿಭಟನೆ ನಡೆಸಿದರು.

ಗುರುವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಸಂಘದ ಕಾರ್ಯಕರ್ತರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಮನೆಗೆ ಮುತ್ತಿಗೆ ಹಾಕಲು ಹೊರಟ ರೈತ ಸಂಘದ ಕಾರ್ಯಕರ್ತರನ್ನು ಬಸವೇಶ್ವರ ವೃತ್ತದಲ್ಲಿ ತಡೆದು ನಿಲ್ಲಿಸಿದರು. ಇದರಿಂದ ಪೊಲೀಸರ ಮತ್ತು ರೈತರ ನಡುವೆ ಸ್ವಲ್ಪ ನುಕ್ಕ ನುಗಿಲು ಉಂಟಾಯಿತು. ನಂತರ ಸಂಘದ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಸುಮಾರು ಎರೆಡು ಘಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಯಿಸಿ ಧರಣಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಈರಣ್ಣಾ ಅಂಗಡಿ , ಗೋಪಾಲ ಬಾಳಿಕಟ್ಟಿ ,ಶ್ರೀಶೈಲ ಅಂಗಡಿ , ಮಲ್ಲಪ್ಪ ಅಂಗಡಿ ಸೇರಿದಂತೆ ಇತರ ನಾಯಕರು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ ಕರ್ನಾಟಕ ಸರಕಾರ 1961 ರ ಭೂ ಸುಧಾರಣೆ ಕಾಯಿದೆ 79-ಎ ,ಬಿ.ಸಿ ಮತ್ತು 80 ನೇ ಗಳನ್ನು ಪೂರ್ವಾನ್ವಯವಾಗುವಂತೆ ರದ್ದು ಪಡಿಸಿದೆ ಹಾಗೂ 63 ನೇ ಕಲಮಿಗೆ ತಿದ್ದುಪಡಿ ತಂದಿದೆ. 1961 ರ ಕಾಯಿದೆಯ 79 – ಎ ಮತ್ತು ಬಿ ಕಲಮಗಳು ಕೃಷಿಯೇತರ ಮೂಲಗಳಿಂದ ಹೆಚ್ಚು ಆದಾಯ ಉಳ್ಳವರು ಹಾಗೂ ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ಕಬಳಿಸದಂತೆ ರಕ್ಷಣೆ ಒದಗಿಸುತ್ತಿತು. ಆದರೆ ಸರಕಾರದ ಈ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಭೂಮಿಯನ್ನು ಸುಲಭವಾಗಿ ಕಬಳಿಸಬಹುದು. ಸಣ್ಣ ರೈತಾಪಿ ವರ್ಗದವರು ಇನ್ನಷ್ಟು ವ್ಯವಸ್ಥಿತವಾಗಿ ಹಾಗೂ ಶಾಸನಬದ್ದವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ. ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಹಿಡಿತ ಹೆಚ್ಚಾಗಿ ಭಾರತದ ಆಹಾರ ಸ್ವಾವಲಂಬನೆ ಮತ್ತು ಆಹಾರ ಸಾರ್ವಭೌಮತೆ ಕ್ರಮೇಣವಾಗಿ ಇಲ್ಲವಾಗುತ್ತಾ ಹೋಗುತ್ತಿದೆ ಎಂದು ಆರೋಪಿಸಿದ ರೈತ ಮುಖಂಡರು ಶೀಘ್ರ ಈ ಕಾನೂನುನ್ನು ಹಿಂಪಡಿಯಬೇಕು ಎಂದು ಆಗ್ರಹಿಸಿದರು.

ನಂತರ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಅವರ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಸರಕಾರಕ್ಕೆ ಮನವಿ ಅರ್ಪಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಸ್ ಆರ್ ಪೂಜಾರಿ, ರಾಮಪ್ಪ ಡಭಾಜ, ಬಿ.ಎಂ ಸಸಾಲಟ್ಟಿ, ಪ್ರಕಾಶ ತೆರದಾಳ, ಅಶೋಕ ಮಾಚ್ಚಕನೂರ , ವೆಂಕಪ್ಪಾ ಅವರಾದಿ, ಲಕ್ಷ್ಮಣ ತೋಳಮರಡಿ , ಸಕ್ರೇಪ್ಪ ತೋಳಮರಡಿ, ಸುಭಾಸ ಸಾರಾಪೂರ, ಮಲ್ಲಪ್ಪ ಕೂರಿ, ಯಮನಪ್ಪ ಚಿಂಚನೂರ, ಮಂಜುನಾಥ್ ಕೂರಿ, ಟಿ‌.ಜಿ ಪೂಜಾರಿ, ಸಚಿನ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: