ಗೋಕಾಕ:ಸರ್ಕಾರದ ನಿಯಮಗಳ ತಿದ್ದುಪಡಿಯನ್ನು ವಾಪಸ್ಸು ಪಡಿಯುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರ ಮನವಿ
ಸರ್ಕಾರದ ನಿಯಮಗಳ ತಿದ್ದುಪಡಿಯನ್ನು ವಾಪಸ್ಸು ಪಡಿಯುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 :
ಕಾರ್ಪೋರೆಟ್ ಕಂಪನಿಗಳಿಗೆ ಕೃಷಿಯನ್ನು ವಹಿಸಲು ಹೊರಟಿರುವ ಸರ್ಕಾರದ ನಿಯಮಗಳ ತಿದ್ದುಪಡಿಯನ್ನು ವಾಪಸ್ಸು ಪಡಿಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸೋಮವಾರದಂದು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಎಪಿಎಮ್‍ಸಿ ಕಾಯ್ದೆ ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ 2019, ಭೂ ಸ್ವಾಧಿನ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಮಾದರಿ ಭೂ ಗುತ್ತಿಗೆ ಮಸೂದೆ ಇವುಗಳು ತಿದ್ದುಪಡಿ ರೈತರಿಗೆ ಮಾರಕವಾಗಿದ್ದು ಶ್ರೀಮಂತರಿಗೆ ಮತ್ತು ಬಂಡವಾಳಶಾಹಿಗಳಿಗೆ ಪೂರಕವಾಗಿದ್ದು, ತಕ್ಷಣ ಈ ಕಾಯ್ದೆಗಳನ್ನು ಹಿಂಪಡೆದು ರೈತ ಸಮುದಾಯದ ಹಿತಕಾಯುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಕಳೆದ ವರ್ಷ ನೆರೆ ಸಂತ್ರಸ್ತರಿಗೆ ನೀಡಬೇಕಾಗಿರುವ ಪರಿಹಾರವನ್ನು ಕೂಡಲೇ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಮಂಜುನಾಥ ಪೂಜೇರಿ, ಭರಮು ಖೇಮಲಾಪೂರೆ, ಮಹಾದೇವ ಗೋಡೇರ, ಮಾರುತಿ ನಾಯಿಕ, ಯಲ್ಲಪ್ಪ ತಿಗಡಿ, ಮುತ್ತೆಪ್ಪ ಬಾಗನ್ನವರ, ಸಿದ್ರಾಮ ಪೂಜೇರಿ, ಅಮರ ಮಡಿವಾಳರ, ಪುಂಡಲೀಕ ನೀಡಸೋಸಿ, ಇರ್ಫಾನ ಜಮಾದರ, ಯಶೋಧಾ ಬಿರಡಿ ಸೇರಿದಂತೆ ಅನೇಕರು ಇದ್ದರು.