ಗೋಕಾಕ:ರವಿವಾರದ ಸಂತೆ ರದ್ದು : ಶನಿವಾರಂದು ಅಪಾರ ಜನಸಂದಣಿ ನಡುವೆ ನಡೆದ ವ್ಯಾಪಾರ ವಹಿವಾಟು
ರವಿವಾರದ ಸಂತೆ ರದ್ದು : ಶನಿವಾರಂದು ಅಪಾರ ಜನಸಂದಣಿ ನಡುವೆ ನಡೆದ ವ್ಯಾಪಾರ ವಹಿವಾಟು
ನಮ್ಮ ಬೆಳಗಾವಿ ಇ – ವಾರ್ತೆ ,ಬೆಟಗೇರಿ ಅ 8 :
ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆ ಅಗಸ್ಟ ತಿಂಗಳಾದ್ಯಂತ ರದ್ದುಗೊಳಿಸಿದ ಹಿನ್ನಲೆಯಲ್ಲಿ ಶನಿವಾರಂದು ಅಪಾರ ಜನಸಂದಣಿ ನಡುವೆ ಬೀದಿ ವ್ಯಾಪಾರಸ್ಥರು, ಹಣ್ಣು, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡುತ್ತಿರುವುದು ಕಂಡು ಬಂದಿತು.
ದೇಶಕ್ಕೆ ಬೆಂಬಿಡದೆ ಕಾಡುತ್ತಿರುವ ಕೊರೋನಾ ಮಹಾಮಾರಿ ಸೋಂಕು ಹರಡದಂತೆ ಸರಕಾರಗಳು ಲಾಕಡೌನ ನಂತಹ ಕಠಿಣವಾದ ಕ್ರಮಗಳನ್ನು ಕೈಗೊಂಡರು ಸಹ ಕೊರೋನಾ ಸೋಂಕು ತಮ್ಮ ಪ್ರಮಾದವನ್ನು ಬಿಡದೆ ಜನರನ್ನು ಕಾಡುತ್ತಿದೆ ಇದನ್ನು ಅರಿತ ಸರಕಾರ ಲಾಕಡೌನ ನಿರ್ಧಾರದಿಂದ ಹಿಂದೆ ಸರಿದು ಸಾಮಾಜಿಕ ಅಂತರ , ಮಾಸ್ಕ ಹಾಗೂ ಸೈನಿಟೈಜರ ಗಳ ಬಳಕೆ ಮಾಡಬೇಕು ಎಂಬ ಮಾರ್ಗಸೂಚಿ ಬಿಡುಗಡೆ ಮಾಡಿ ವ್ಯಾಪಾರ ವಹಿವಾಟಿಗೆ ಅನುವು ಮಾಡಿ ಕೊಟ್ಟಿದೆ. ಇದು ಕೆಲವು ಕಡೆಗಳಲ್ಲಿ ಪಾಲನೆ ಯಾದರೆ ಇನ್ನು ಬಹಳಷ್ಟು ಕಡೆಗಳಲ್ಲಿ ಪಾಲನೆ ಆಗುತ್ತಿಲ್ಲಾ . ಇದಕ್ಕಾಗಿಯೇ ಕೆಲವು ಕಡೆಗಳಲ್ಲಿ ಊರಿನ ಪ್ರಮುಖರು ಸೇರಿ ಸ್ವಯಂ ಪ್ರೇರಿತ ಕೆಲವು ನಿರ್ಧಾರಗಳನ್ನು ತಗೆದುಕೊಂಡು ಸಂತೆಗಳನ್ನು ಕೆಲ ದಿನಗಳವರೆಗೆ ರದ್ದುಗೋಳಿಸಿದ್ದಾರೆ. ಅದರಂತೆ ತಾಲೂಕಿನ ಬೆಟಗೇರಿ ಗ್ರಾಮದ ಹಿರಿಯರು ಕೂಡಿಕೊಂಡು ಅಗಸ್ಟ ತಿಂಗಳಲ್ಲಿ ಪ್ರತಿ ರವಿವಾರ ನಡೆಯುವ ಸಂತೆಯನ್ನು ರದ್ದು ಗೋಳಿಸಿ ಪ್ರಕಟಣೆ ನೀಡಿದ್ದರು. ನಾಳೆ ರವಿವಾರದಂದು ನಡೆಯುವ ಸಂತೆ ರದ್ದಾಗಿರುವ ಪರಿಣಾಮ ಗ್ರಾಮದಲ್ಲಿ ಶನಿವಾರದಂದು ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು , ಸಾಮಾಜಿಕ ಅಂತರ ,ಮಾಸ್ಕ ಇಲ್ಲದೆ ವ್ಯಾಪಾರಸ್ಥರು ಹಾಗೂ ಅಕ್ಕ – ಪಕ್ಕದ ಗ್ರಾಮಸ್ಥರು ಸೇರಿ ಸರಕಾರದ ಮಾರ್ಗಸೂಚಿಯನ್ನು ಗಾಳಿಗೆ ತೂರಿರುವ ಘಟನೆ ಜರುಗಿದೆ.