RNI NO. KARKAN/2006/27779|Wednesday, November 5, 2025
You are here: Home » breaking news » ಗೋಕಾಕ:ಕನ್ನಡ ಭಾಷೆಯನ್ನು ನಿರ್ಲಕ್ಷಿಸಿರುವ ಜವಳಿ ಸಚಿವ ಶ್ರೀಮಂತ ಪಾಟೀಲ ಪ್ರತಿಕೃತಿ ದಹಿಸಿ ಕರವೇ ಆಕ್ರೋಶ

ಗೋಕಾಕ:ಕನ್ನಡ ಭಾಷೆಯನ್ನು ನಿರ್ಲಕ್ಷಿಸಿರುವ ಜವಳಿ ಸಚಿವ ಶ್ರೀಮಂತ ಪಾಟೀಲ ಪ್ರತಿಕೃತಿ ದಹಿಸಿ ಕರವೇ ಆಕ್ರೋಶ 

ಕನ್ನಡ ಭಾಷೆಯನ್ನು ನಿರ್ಲಕ್ಷಿಸಿರುವ ಜವಳಿ ಸಚಿವ ಶ್ರೀಮಂತ ಪಾಟೀಲ ಪ್ರತಿಕೃತಿ ದಹಿಸಿ ಕರವೇ ಆಕ್ರೋಶ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 2 :

 
ಮರಾಠಿಯಲ್ಲಿ ಭಾಷಣ ಮಾಡಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿರುವ ಜವಳಿ ಸಚಿವ ಶ್ರೀಮಂತ ಪಾಟೀಲ ಅವರ ಪ್ರತಿಕೃತಿ ದಹಿಸಿ ಇಲ್ಲಿಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರವಿವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಕರ್ನಾಟಕದ ನೆಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಮರಾಠಿಯಲ್ಲಿ ಮಾತನಾಡಿ ಕನ್ನಡವನ್ನು ಅವಮಾನಿಸಿರುವುದು ತರವಲ್ಲ , ಮಹಾರಾಷ್ಟ್ರ ರಾಜ್ಯದ ಸಚಿವರನ್ನು ಓಲೆಸಲು ಸಚಿವ ಶ್ರೀಮಂತ ಪಾಟೀಲ ಅವರು ಮರಾಠಿಯಲ್ಲಿ ಮಾತನಾಡಿರುವುದು ಅವರ ಮರಾಠಿ ಪ್ರೇಮವನ್ನು ಎತ್ತಿ ತೊರಿಸುತ್ತದೆ. ಇಂತಹ ಬೇಜವಾಬ್ದಾರಿ ಸಚಿವರನ್ನು ಮುಖ್ಯಮಂತ್ರಿಗಳು ತಮ್ಮ ಸಂಪುಟದಿಂದ ಕೈ ಬಿಟ್ಟು ತಕ್ಕಪಾಠ ಕಲಿಸಬೇಕು. ಶ್ರೀಮಂತ ಪಾಟೀಲ ಮತಬ್ಯಾಂಕ , ಮನವೊಲಿಸುವ ರಾಜಕಾರಣ ಬಿಟ್ಟು ಕನ್ನಡದಲ್ಲೇ ವ್ಯವಹರಿಸಲು ಕಲಿಯಬೇಕು ಇಲ್ಲದಿದ್ದರೆ ಅವರಿಗೆ ತಕ್ಕಶಾಸ್ತ ಕಲಿಸಬೇಕಾಗುತ್ತೆ ಎಂದು ಖಾನಪ್ಪನವರ ಹೇಳಿದರು‌.

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ ,ಮಂಜುನಾಥ ಪ್ರಭುನಟ್ಟಿ , ಯಲ್ಲಪ್ಪಾ ಧರ್ಮಟ್ಟಿ , ಅಶೋಕ ಬಂಡಿವಡ್ಡರ , ಮುಗುಟ ಪೈಲವಾನ
ದುರ್ಗಪ್ಪಾ ಬಂಡಿವಡ್ಡರ , ಸಂತೋಷ ಬಂಡಿವಡ್ಡರ , ಸುರೇಶ ಬಂಡಿವಡ್ಡರ , ವಿಠ್ಠಲ ಬಂಡಿವಡ್ಡರ ರಾಜು ಬಂಡಿವಡ್ಡರ , ಸತ್ತಾರ ಬೇಪಾರಿ , ಗುರು ಮುನ್ನೋಳಿಮಠ , ಅಬ್ದುಲ ಪಿರಜಾದೆ , ಪ್ರತೀಕ ಪಾಟೀಲ , ಈರಣ್ಣಾ ನರಸಣ್ಣವರ , ಅಪ್ಪಾಸಾಬ ಖೇಮಲಾಪುರೆ ಹಣಮಂತ ಅಮ್ಮಣಗಿ , ಹಾರುನ ಮುಲ್ಲಾ ಆನಂದ ಬಿರಡಿ ಉಪಸ್ಥಿತರಿದ್ದರು.

Related posts: