ಗೋಕಾಕ:ಕರೋನಾ ವಿರುದ್ಧದ ಹೋರಾಟ ಒಂದು ಯುದ್ಧವಿದ್ದಂತೆ ಸಾರ್ವಜನಿಕರ ಸಹಕಾರದಿಂದ ಇದನ್ನು ತಡೆಗಟ್ಟಲು ಸಾಧ್ಯ : ಆರ್.ಎಂ ಗಣಾಚಾರಿ
ಕರೋನಾ ವಿರುದ್ಧದ ಹೋರಾಟ ಒಂದು ಯುದ್ಧವಿದ್ದಂತೆ ಸಾರ್ವಜನಿಕರ ಸಹಕಾರದಿಂದ ಇದನ್ನು ತಡೆಗಟ್ಟಲು ಸಾಧ್ಯ : ಆರ್.ಎಂ ಗಣಾಚಾರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 31 :
ಕರೋನಾ ವಿರುದ್ಧದ ಹೋರಾಟ ಒಂದು ಯುದ್ಧವಿದ್ದಂತೆ ಸಾರ್ವಜನಿಕರ ಸಹಕಾರದಿಂದ ಇದನ್ನು ತಡೆಗಟ್ಟಲು ಸಾಧ್ಯ ಎಂದು ನಗರಸಭೆ ಟಾಸ್ಕಪೋರ್ಸ ಅಧಿಕಾರಿ ಆರ್.ಎಂ ಗಣಾಚಾರಿ ಹೇಳಿದರು
ಶುಕ್ರವಾರದಂದು ನಗರದ ವಾರ್ಡ ನಂ 22 ರಲ್ಲಿ ನಗಸಭೆ ವತಿಯಿಂದ ಹಮ್ಮಿಕೊಂಡಿದ್ದ ವಾರ್ಡ ಮಟ್ಟದ ಟಾಸ್ಕಪೋರ್ಸ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಕೊರೋನಾ ವೈರಸ್ ಪ್ರಪಂಚದ ವ್ಯಾಪ್ತಿಯಲ್ಲಿ ಹರಡಿದ್ದು, ಸರಕಾರದ ಮಟ್ಟದಲ್ಲಿ ಇದನ್ನು ತಡೆಗಟ್ಟಲು ಸಾಕಷ್ಟು ಹರಸಾಹಸ ನಡೆದಿದೆ. ಇದರಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಮಹತ್ವದಾಗಿದ್ದು ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ತೊರಿಸಿ ತಮ್ಮ ಅಕ್ಕಪಕ್ಕದಲ್ಲಿ ಕೊರೋನಾ ವೈರಸ್ ಹರಡದಂತೆ ಜಾಗೃತಿ ಮೂಡಿಸಬೇಕು ಅಂದಾಗ ಮಾತ್ರ ಕೊರೋನಾ ಹೊಗಲಾಡಿಸಲು ಸಾಧ್ಯ.ಸಾರ್ವಜನಿಕ ಸ್ಥಳಗಳಲ್ಲಿ ಬಂದಾಗ ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅನಗತ್ಯವಾಗಿ ಮನೆಯಿಂದ ಹೊರಗಡೆ ಬರದೆ ಇದರ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕು. ವಾರ್ಡ ಮಟ್ಟದಲ್ಲಿ ಯಾರಿಗಾದರೂ ತೊಂದರೆಯಾದರೆ ವೈದ್ಯಕೀಯ ಚಿಕಿತ್ಸೆ ನೀಡಲು ಟಾಸ್ಕಪೋರ್ಸ ಸಮಿತಿ ವಾರ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ವಾರ್ಡದಲ್ಲಿ ಯಾವುದೇ ಪ್ರದೇಶ ಸಿಲ್ಡೌನ ಆದರೆ ಆ ಪ್ರದೇಶದ ಎಲ್ಲರಿಗೂ ಅಗತ್ಯ ವಸ್ತುಗಳನ್ನು ಒದಗಿಸಲು ಸಮಿತಿ ಎಲ್ಲ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಬೇರೆ ರಾಜ್ಯದಿಂದ ಬಂದು ಕ್ವಾರಂಟೈನ ಆದವರು ಹೊರಗೆ ಬಾರದಂತೆ ನೋಡಿಕೊಂಡು ಅವರಿಗೆ ಅಗತ್ಯ ವಸ್ತುಗಳನ್ನು ಒದಗಿಸಬೇಕು. ನಿಷ್ಕಾಳಜಿ ಮಾಡದೆ ಕಟ್ಟುನಿಟ್ಟಿನ ಎಲ್ಲರೂ ಕೊರೋನಾ ವೈರಸ್ ಹರಡದಂತೆ ಮುಂಜಾಗೃತೆ ಕ್ರಮ ವಹಿಸಕೊಳ್ಳಬೇಕು ಗಣಾಚಾರಿ ಹೇಳಿದರು.
ಈ ಸಂದರ್ಭದಲ್ಲಿ ಟಾಸ್ಕಪೋರ್ಸ ಅಧಿಕಾರಿಗಳಾದ
ಎಸ್.ಎಸ್.ಇಬ್ಬರಂಡಿ, ಕೆ.ಎಸ್ ಕೋಳಿ , , ಶ್ರೀಮತಿ ಬಿ.ಆರ್ ಮದ್ರಾಸಿ, ನಗರಸಭೆ ಸದಸ್ಯ ಅಬ್ಬುಲರಹೇಮಾನ ದೇಸಾಯಿ, ಮುಖಂಡರುಗಳಾದ
ಮುಸ್ತಾಕ ಖಂಡಾಯತ್. ಸಾದಿಕ ಹಲ್ಯಾಳ, ಅಬ್ಬಾಸ ದೇಸಾಯಿ. ಖಾಜಾಸಾಬ ಮತ್ತೆ, ಚಂದ್ರು ಸೆಂಡಗೆ,ಯಾಸೀನ ಮುಲ್ಲಾ , ಸೇರಿದಂತೆ ಇತರರು ಇದ್ದರು