RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಗೋಕಾಕ ಕೋರ್ಟ್’ನಿಂದ ಸಿಎಂ ಯಡಿಯೂರಪ್ಪಗೆ ಸಮನ್ಸ್ ಜಾರಿ‌: ಸೆ.1 ರಂದು ಹಾಜರಾಗುವಂತೆ ಸೂಚನೆ

ಗೋಕಾಕ:ಗೋಕಾಕ ಕೋರ್ಟ್’ನಿಂದ ಸಿಎಂ ಯಡಿಯೂರಪ್ಪಗೆ ಸಮನ್ಸ್ ಜಾರಿ‌: ಸೆ.1 ರಂದು ಹಾಜರಾಗುವಂತೆ ಸೂಚನೆ 

ಗೋಕಾಕ ಕೋರ್ಟ್’ನಿಂದ ಸಿಎಂ ಯಡಿಯೂರಪ್ಪಗೆ ಸಮನ್ಸ್ ಜಾರಿ‌: ಸೆ.1 ರಂದು ಹಾಜರಾಗುವಂತೆ ಸೂಚನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :

 
ಗೋಕಾಕ ಉಪ ಚುನಾವಣೆಯಲ್ಲಿ ದಾಖಲಾದ ಚುನಾವಣಾ ನೀತಿ ಸಂಹಿತೆ ಪ್ರಕರಣವೊಂದಕ್ಕೆ ಸಮಂಧಿಸಿದಂತೆ ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಗೋಕಾಕ JMFC ಕೋರ್ಟ್  ಸಮನ್ಸ್ ಜಾರಿ ಮಾಡಿದೆ.

ಗೋಕಾಕ ಉಪ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕಬೇಕೆಂದು,ಚುನಾವಣಾ ಪ್ರಚಾರದ ಸಭೆಯಲ್ಲಿ ಮತಯಾಚಿಸಿದ್ದರು,ಜಾತಿ ಹೆಸರಿನಲ್ಲಿ ಮತಯಾಚನೆ ಮಾಡಿದ್ದಾರೆ ಎಂದು ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಗೋಕಾಕ್ ಪೋಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ಪೋಲೀಸ್ ಠಾಣೆಯಿಂದ ನ್ಯಾಯಾಲಯದಲ್ಲಿ “B” ರಿಪೋರ್ಟ್ ಸಲ್ಲಿಕೆಯಾಗಿತ್ತು ಆದ್ರೆ ನ್ಯಾಯಾಲಯ “B” ರಿಪೋರ್ಟ್ ನ್ನು ತಿರಸ್ಕಾರ ಮಾಡಿ ಮುಖ್ಯಮಂತ್ರಿ ಬಿ .ಎಸ್ ಯಡಿಯೂರಪ್ಪ ನವರಿಗೆ ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುತೆ ಸಮನ್ಸ್ ಜಾರಿ ಮಾಡಿದೆ.

Related posts: