ಖಾನಾಪುರ:ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ
ಪಟ್ಟಣ ಪಂಚಾಯತಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ
ಖಾನಾಪುರ ಜು 5: ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಸ್ಧಳೀಯ ಚುನಾಯಿತ ಪಟ್ಟಣ ಪಂಚಾಯಿತಿಯ ಸದಸ್ಯರು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಸದಸ್ಯರೊಂದಿಗೆ ಚರ್ಚಿಸಿದ ರಮೇಶ ಪಟ್ಟಣದಲ್ಲಿ ಲಕ್ಷೀ ಜಾತ್ರೆ ಇರುವ ಸಂದರ್ಭದಲ್ಲಿ ಮಾರುತಿ ನಗರದಿಂದ ಹಿಡಿದು ಡಾ.ರಾಜಕುಮಾರ ರಸ್ತೆಯವರೆಗೆ ಡಬ್ಬಲ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಯಿತು.
ಪಟ್ಟಣದ ಅಭಿವೃಧ್ದಿಗಾಗಿ ವಿಷೇಶ ಅನುದಾನ ಅಡಿ ಅಭಿವೃಧ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 16 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಅವರಿಗೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಅಜೀಂ ತೇಲಗಿ,ಸ್ಧಾಯಿ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಕೋಡೊಳಿ ಹಾಗೂ ಸದಸ್ಯರು ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ರಮೇಶ ಜಾರಕಿಹೊಳಿ ಮಾತನಾಡಿ ಈ ವಿಷಯವನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರಗಾಗಿ ಅನುದಾನ ದೋರಕಿಸಿಕೋಡಲಾಗುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ ಪಂ ಅಧ್ಯಕ್ಷ ಅಜೀಂ ತೇಲಗಿ ಉಪಾಧ್ಯಕ್ಷ ನಾರಾಯಣ ಮಹೇಕರ,ಪಪಂ ಸದಸ್ಯರಾದ ಮಹಾಂತೇಶ ಕೋಡೊಳಿ,ರಫೀಕ ವಾರಿಮನಿ ಇದ್ದರು.