RNI NO. KARKAN/2006/27779|Saturday, October 5, 2024
You are here: Home » breaking news » ಗೋಕಾಕ:ನಾಳೆಯಿಂದ ಕೊರೋನಾ ಸೋಂಕಿತರಿಗೆ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ : ಡಾ‌.ಜಗದೀಶ ಜಿಂಗಿ

ಗೋಕಾಕ:ನಾಳೆಯಿಂದ ಕೊರೋನಾ ಸೋಂಕಿತರಿಗೆ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ : ಡಾ‌.ಜಗದೀಶ ಜಿಂಗಿ 

ನಾಳೆಯಿಂದ ಕೊರೋನಾ ಸೋಂಕಿತರಿಗೆ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ : ಡಾ‌.ಜಗದೀಶ ಜಿಂಗಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :   ನಾಳೆ ಶುಕ್ರವಾರದಿಂದ ಕೊರೋನಾ ಸೋಂಕಿತರಿಗೆ ಗೋಕಾಕ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವದು ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಸರಕಾರ ಹಾಗೂ ಇಲಾಖೆಯ ನಿರ್ದೇಶನದಂತೆ ತಾಲೂಕಿನ ಕೊರೋನಾ ಸೋಂಕು ದೃಡಪಟ್ಟವರನ್ನು ಶುಕ್ರವಾರದಿಂದ ಸ್ಥಳೀಯ ಗೋಕಾಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವದು ಇದಕ್ಕಾಗಿ ಈಗಾಗಲೇ ಎಲ್ಲ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಆರೋಗ್ಯ ಸಿಬ್ಬಂದಿಗಳಿಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ 30 ಹಾಸಿಗೆ ಉಳ್ಳ ಸುಸಜ್ಜಿತ ಪ್ರತ್ಯೇಕ ವಾರ್ಡನ್ನು ಸಿದ್ದಗೊಳಿಸಲಾಗಿದ್ದು, ರೋಗಿ ಒಳ ಬರಲು ಮತ್ತು ಹೊರ ಹೋಗಲು ಪ್ರತ್ಯೇಕ ಮಾರ್ಗವನ್ನು ಸಿದ್ದಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

Related posts: