ಗೋಕಾಕ:ಶಿವಶರಣ ಹಡಪದ ಅಪ್ಪಣ್ಣವರ 886ನೇ ಜಯಂತಿಯನ್ನು ಸರಳವಾಗಿ ಆಚರಣೆ
ಶಿವಶರಣ ಹಡಪದ ಅಪ್ಪಣ್ಣವರ 886ನೇ ಜಯಂತಿಯನ್ನು ಸರಳವಾಗಿ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜು 8 :
ಕರೊನಾ ಮಹಾಮಾರಿ ತಡೆಗಟ್ಟುವ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಜು.7ರಂದು ಶಿವಶರಣ ಹಡಪದ ಅಪ್ಪಣ್ಣವರ 886ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಬಸವರಾಜ ಬೆಟಗೇರಿ ಅವರು ಶಿವಶರಣ ಅಪ್ಪಣ್ಣವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಲಕ್ಕಪ್ಪ ಮೇಳೆಣ್ಣವರ, ವೀರಭದ್ರ ಫಕೀರಪ್ಪ ನಾವಿ ಸೇರಿದಂತೆ ಸ್ಥಳೀಯ ಶಿವಶರಣ ಹಡಪದ ಅಪ್ಪಣ್ಣ ಸಮುದಾಯದ ಹಿರಿಯ ನಾಗರಿಕರು, ಶಾಲೆಯ ಶಿಕ್ಷಕರು, ಇತರರು ಇದ್ದರು. ಗ್ರಾಮ ಪಂಚಾಯಿತಿ ಕಾರ್ಯಾಲಯ: ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಜು.7ರಂದು ಶಿವಶರಣ ಹಡಪದ ಅಪ್ಪಣ್ಣವರ 886ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈರಪ್ಪ ಹಡಪದ ಅವರು ಶಿವಶರಣ ಅಪ್ಪಣ್ಣವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಪಂ ಕಾರ್ಯದರ್ಶಿ ಪರಶುರಾಮ ಇಟಗೌಡ್ರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಶಿವಾನಂದ ಐದುಡ್ಡಿ, ಈರಪ್ಪ ದಂಡಿನ, ವೀರಭದ್ರ ಫಕೀರಪ್ಪ ನಾವಿ ಸೇರಿದಂತೆ ಗ್ರಾಪಂ ಸದಸ್ಯರು, ಸ್ಥಳೀಯ ಶಿವಶರಣ ಹಡಪದ ಅಪ್ಪಣ್ಣ ಸಮುದಾಯದ ಹಿರಿಯ ನಾಗರಿಕರು, ಇತರರು ಇದ್ದರು.