ಗೋಕಾಕ:ಜೂನ್ 6ರಂದು ಸಂಜೆ 6ಕ್ಕೆ ಕರ್ನಾಟಕ ಜನ ಸಂವಾದ ಸಮಾರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷಜಿ ಭಾಗಿ
ಜೂನ್ 6ರಂದು ಸಂಜೆ 6ಕ್ಕೆ ಕರ್ನಾಟಕ ಜನ ಸಂವಾದ ಸಮಾರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷಜಿ ಭಾಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 5 :
ಜೂನ್ 6ರಂದು ಸಂಜೆ 6ಕ್ಕೆ ಜರುಗಲಿರುವ ಕರ್ನಾಟಕ ಜನ ಸಂವಾದ ಸಮಾರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷಜಿ ಮಾತನಾಡಲಿದ್ದಾರೆ. ಈ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಜನಪರ ಸಾಧನೆಗಳನ್ನು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ವಚ್ರ್ಯುವಲ್ ರ್ಯಾಲಿ ಮುಖಾಂತರ ನಡೆಸಲಾಗಿದೆ.
ಕಾರ್ಯಕ್ರಮವನ್ನು ನಗರದ ಯೋಗಿಕೊಳ್ಳ ರಸ್ತೆಯ ಸಾಸಕರ ಕಾರ್ಯಾಲಯ, ಎಪಿಎಮ್‍ಸಿ ಗಾಂಧಿ ನಗರದ ಶ್ರೀ ಕರೆಮ್ಮ ದೇವಸ್ಥಾನ, ಗುರುವಾರ ಪೇಠ ಶ್ರೀ ಲಕ್ಷ್ಮೀ ದೇವಸ್ಥಾನ, ವಿವೇಕಾನಂದ ನಗರ 3ನೇ ಕ್ರಾಸ್ ಶ್ರೀ ಆಂಜನೇಯ ದೇವಸ್ಥಾನ, ಸೋಮವಾರ ಪೇಠದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ವಿಕ್ಷಣೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಕೈಜೋಡಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದ್ದಾರೆ.