ಗೋಕಾಕ:ಅಂತರಂಗ ಪರಿಶುದ್ಧತೆಯಿಂದ ನುಡಿಯುವ ಮಹತ್ಮರ ಮಾತುಗಳು ಜೋರ್ತಿಲಿಂಗಗಳಾಗಿರುತ್ತವೆ : ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ

ಅಂತರಂಗ ಪರಿಶುದ್ಧತೆಯಿಂದ ನುಡಿಯುವ ಮಹತ್ಮರ ಮಾತುಗಳು ಜೋರ್ತಿಲಿಂಗಗಳಾಗಿರುತ್ತವೆ : ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ
ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಸೆ 11 :
ಅಂತರಂಗ ಪರಿಶುದ್ಧತೆಯಿಂದ ನುಡಿಯುವ ಮಹತ್ಮರ ಮಾತುಗಳು ಜೋರ್ತಿಲಿಂಗಗಳಾಗಿರುತ್ತವೆ ಎಂದು ನದಿ ಇಂಗಳಗಾಂವದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 157ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿವತತ್ವಗಳನ್ನು ನುಡಿಯುತ್ತಿರುವ ಮಹತ್ಮರ ಮಾತುಗಳನ್ನು ಆನಂದದಿಂದ ಆಲಿಸಿದರೆ ಮನಸ್ಸು ಪರಿಶುದ್ಧವಾಗುತ್ತದೆ. ಪರಿಶುದ್ಧವಾದ ಮನಸ್ಸೆ ಶ್ರೇಷ್ಠವಾಗಿದ್ದು, ಸದಾಚಾರಗಳಿಂದ ಶಿವನಲ್ಲಿ ಭಕ್ತಿಹೊಂದಿ ನಡೆಯುವಂತೆ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆಯಲ್ಲಿ ಬಸನಗೌಡ ಪಾಟೀಲ, ಮಾಲತಿ ಪಟ್ಟಣಶೆಟ್ಟಿ , ಜಗದೀಶ್ ಬಳಗಾರ, ಸುಮಿತ್ರಾ ಗುರಾಣಿ, ಮಹಾದೇವಪ್ಪ ಈಟಿ ಇದ್ದರು.