RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸೇವಾ ನಿವೃತ್ತಿ ಹೊಂದಿದ್ದ ಯಲ್ಲಪ್ಪ ಮನ್ನಿಕೇರಿ ಅವರಿಗೆ ಸತ್ಕಾರ

ಗೋಕಾಕ:ಸೇವಾ ನಿವೃತ್ತಿ ಹೊಂದಿದ್ದ ಯಲ್ಲಪ್ಪ ಮನ್ನಿಕೇರಿ ಅವರಿಗೆ ಸತ್ಕಾರ 

ಸೇವಾ ನಿವೃತ್ತಿ ಹೊಂದಿದ್ದ  ಯಲ್ಲಪ್ಪ ಮನ್ನಿಕೇರಿ  ಅವರಿಗೆ ಸತ್ಕಾರ

ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಮೇ 30 :

ಇಲ್ಲಿನ  ಮಿನಿ ವಿಧಾನ ಸೌಧದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜವಾನರಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಯಲ್ಲಪ್ಪ ಮನ್ನಿಕೇರಿ ಅವರು ಶನಿವಾರದಂದು ಸೇವಾ ನಿವೃತ್ತಿ ಹೊಂದಿದ್ದ ನಿಮಿತ್ಯ ಅವರನ್ನು ಸತ್ಕರಿಸಿ ಬಿಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಪಾಸಕ ಎಮ್.ಆರ್. ಭೋವಿ ಅವರು ಸುದೀರ್ಘ 40 ವರ್ಷಗಳ ಕಾಲ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆಯಿಂದ ಎಲ್ಲರೊಂದಿಗೆ ಬೆರೆತು ಸೇವೆ ಸಲ್ಲಿಸಿರುವ ಯಲ್ಲಪ್ಪ ಮನ್ನಿಕೇರಿ ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತಪಾಸಕ ಬಿ.ವಾಯ್.ಉಪ್ಪಾರ, ಸರ್ವೆ ಇಲಾಖೆಯ ಅಧಿಕಾರಿಗಳಾದ ಆರ್.ವಾಯ್.ಬಂಡೆನ್ನವರ, ಎ.ಎಮ್.ಬಡಿಗೇರ, ಎಚ್.ಎನ್.ಮುರನಾಳ, ಆರ್.ಎಚ್.ಗುಳನ್ನವರ, ಬಿ.ಎ.ಅಳಗೊಂಡ, ಮಹೇಶ ಆಚಾರ್ಯ ಸೇರಿದಂತೆ ಸಿಬ್ಬಂದಿ ಇದ್ದರು.

Related posts: