ಬೆಳಗಾವಿ:ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧಿಡೀರ್ ಪ್ರತಿಭಟನೆ : ವಾಟಾಳ ಬಂಧನ
ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧಿಡೀರ್ ಪ್ರತಿಭಟನೆ : ವಾಟಾಳ ಬಂಧನ
ಬೆಳಗಾವಿ 15: : ಕಳಸಾ ಬಂಡೂರಿ- ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಾಡಿನ ಹೋರಾಟಗಾರ ವಾಟಾಳ ನಾಗರಾಜ ಕಳಸಾ ಬಂಡೂರಿ ಸ್ಥಳ ಕಣಕುಂಬಿಯಲ್ಲಿ ಇಂದು ರಸ್ತೆ ಮೇಲೆ ಮಲಗಿ ಪ್ರತಿಭಟನೆ ನಡೆಸಿದರು.
ತೋಳು ಮತ್ತು ಕೊರಳಿಗೆ ಕಪ್ಪು ಬಟ್ಟೆ ಧರಿಸಿ ಕಳಸಾ ಬಂಡೂರಿ ಯೋಜನೆ ಜಾರಿಯಾಗಬೇಕು. ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ಕನ್ನಡಿಗರಿಗೆ ಕುಡಿಯುವ ನೀರು ಸಿಗಲೆಬೇಕು…ಸಿಗಲೆಬೇಕು…ಸಿಗಲೆಬೇಕು ಎಂದು ವಾಟಾಳ ಒತ್ತಾಯಿಸಿದರು.
ಅಕ್ಟೋಬರ್ 21 ರಂದು ದೆಹಲಿ ಪಾರ್ಲಿಮೆಂಟಿನ ಎದುರು ಕನ್ನಡ ಮತ್ತು ಪ್ರಗತಿಪರ ಚಿಂತನೆಯ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮಾಡಲಿದ್ದು, ಅಂದು ರಾಜ್ಯದ ಎಲ್ಲ ಸಂಸದರು ನಾಡಿನ ಹಿತಾಸಕ್ತಿಗೆ ರಾಜೀನಾಮೆ ಕೊಡಲು ಸಿದ್ಧಾಗಬೇಕು ಎಂದು ಸಂಸದರಿಗೆ ಪಂಥಾಹ್ವಾನ ನೀಡಿದ್ದರಲ್ಲದೆ ಕೇಂದ್ರಕ್ಕೆ ಎರಡು ರಾಜ್ಯಗಳ ಸಮಸ್ಯೆ ಈಡೇರಿಸುವ ಮನಸ್ಸಿಲ್ಲ ಎಂದು ವಾಟಾಳ ಬೇಸರ ವ್ಯಕ್ತಪಡಿಸಿದರು
ಪ್ರಮುಖ ಸರಕಾರಿ ಕಚೇರಿಗಳನ್ನು ಬೆಳಗಾವಿ ಸುವರ್ಣಸೌಧಕ್ಕೆ ವರ್ಗಾಯಿಸಲು ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಕಣಕುಂಬಿ ರಸ್ತೆಯಲ್ಲಿ ಮಲಗಿದ ವಾಟಾಳ ಅವರನ್ನು ಖಾನಾಪುರ ಪೊಲೀಸರು ಬಂಧಿಸಿ ಬಿಡುಗಡೆ ಗೊಳಿಸಿದರು