RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಪ್ರಿಂಟಿಂಗ್ ಪ್ರೇಸ್ ನವರು ಅನುಭವಿಸುತ್ತಿರುವ ಕಷ್ಟಗಳಿಗೆ ಸರಕಾರ ಸ್ಪಂದಿಸುವಂತೆ ಆಗ್ರಹಿಸಿ ಮನವಿ

ಗೋಕಾಕ:ಪ್ರಿಂಟಿಂಗ್ ಪ್ರೇಸ್ ನವರು ಅನುಭವಿಸುತ್ತಿರುವ ಕಷ್ಟಗಳಿಗೆ ಸರಕಾರ ಸ್ಪಂದಿಸುವಂತೆ ಆಗ್ರಹಿಸಿ ಮನವಿ 

ಪ್ರಿಂಟಿಂಗ್ ಪ್ರೇಸ್ ನವರು ಅನುಭವಿಸುತ್ತಿರುವ ಕಷ್ಟಗಳಿಗೆ ಸರಕಾರ ಸ್ಪಂದಿಸುವಂತೆ ಆಗ್ರಹಿಸಿ ಮನವಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 26 :

 

 

ಲಾಕಡೌನ ಹಿನ್ನಲೆಯಲ್ಲಿ ಮುದ್ರಣ ಕ್ಷೇತ್ರದಲ್ಲಿ ಅನುಭವಿಸುತ್ತಿರುವ ಕಷ್ಟ ನಷ್ಟಗಳಿಗೆ ಸರಕಾರ ಸ್ಪಂದಿಸಿ ಅನುದಾನ ನೀಡುವಂತೆ ಇಲ್ಲಿಯ ಪ್ರಿಂಟಿಂಗ್ ಪ್ರೆಸ್ ಅಸೋಸಿಯೇಷನ್ ನವರ ಮಂಗಳವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು

ಕೊರೋನಾ ಕಂಟಕದ ನಿಮಿತ್ತ ಘೋಷಿಸಲ್ಪಟ ಲಾಕಡೌನ ನಿಂದ ಮದುವೆ, ಗೃಹ ಪ್ರವೇಶ , ಉಪ ನಯನ ಜಾತ್ರೆ ಹಾಗೂ ವಿವಿಧ ಸಮಾರಂಭಗಳು ರದ್ದಾಗಿ ಮುದ್ರಣ ಕ್ಷೇತ್ರದಲ್ಲಿರುವ ಮಾಲೀಕರು ಹಾಗೂ ಕಾರ್ಮಿಕರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ .ಇವರಿಗೂ ಕಟ್ಟಡ ಕಾರ್ಮಿಕರು , ಬಡಿಗತನ ಮುಂತಾದ ಉದ್ಯೋಗಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ನೀಡಬೇಕು. ಮುದ್ರಣ ಕ್ಷೇತ್ರಕ್ಕೆ ಅನುಧಾನ ಘೋಷಿಸಬೇಕು ಬ್ಯಾಂಕ್ ಸಾಲ, ಸಬ್ಬಸಿಡಿ ಮುಂತಾದವುಗಳನ್ನು ಸರಳೀಕರಿಸಿ ಈ ಉದ್ಯೋಗಕ್ಕೆ ಹೆಚ್ಚಿನ ಸರಕಾರಿ ಸಾಲ ನೀಡಬೇಕು . ಸರಕಾರಿ ಹಾಗೂ ಸಹಕಾರಿ ಕಛೇರಿಗಳಿಗೆ ಅವಶ್ಯಕತೆ ಇರುವ ಎಲ್ಲ ತರದ ಮುದ್ರಣಗಳನ್ನು ಸ್ಥಳೀಯವಾಗಿ ಮುದ್ರಿಸಲು ಅವಕಾಶ ಕಲ್ಪಿಸಿಕೊಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ .

ಈ ಸಂದರ್ಭದಲ್ಲಿ ಅಧ್ಯಕ್ಷ ಸಚಿನ ಜಾಧವ, ಪದಾಧಿಕಾರಿಗಳಾದ ಈಶ್ವರ              ದೋಡ್ಡನ್ನವರ , ಶಿವಯ್ಯಾ ಪೂಜೇರಿ, ಪ್ರತಾಪ   ಕುಲಕರ್ಣಿ, ರಾಯಪ್ಪ ಗುದಗನವರ , ಜ್ಞಾನೇಶ್ವರ ಸಾಳುಂಕೆ , ಶೇಖರ ಹೂಗಾರ, ಶೇಖಯ್ಯಾ  ಹಿರೇಮಠ  ಅಬ್ದುಲ್ ಬೋಟಿಯಾಳ ಸೇರಿದಂತೆ ಅನೇಕರು ಇದ್ದರು

Related posts: