ನೇಗಿನಹಾಳ:ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಅರೇನಗ್ನ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಸಾರ್ವಜನಿಕರಲ್ಲಿ ಆತಂಕ
ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಅರೇನಗ್ನ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಸಾರ್ವಜನಿಕರಲ್ಲಿ ಆತಂಕ
ನೇಗಿನಹಾಳ ಅ.15: ಸಮೀಪದ ಹೊಳಿಹೊಸುರ ಗ್ರಾಮದ ಹೊರವಲಯದ ಬೈಲಹೊಂಗಲ-ಎಂ.ಕೆ ಹುಬ್ಬಳ್ಳಿ ರಸ್ತೆಯ ಪಕ್ಕದ ಹನುಮಾನ ಮಂದಿರ ಸಮೀಪದ ಜಮೀನೊಂದರ ಬಳಿ ಶನಿವಾರ ಮುಂಜಾನೆ ಅರೇನಗ್ನ ಸ್ಥಿತಿಯಲ್ಲಿರುವ ಮಹಿಳೆಯೊರ್ಳವ ಶವಪತ್ತೆಯಾಗಿದ್ದು ಸ್ಥಳೀಯರನ್ನು ಬೆಚ್ಚಿಬಿಳಿಸಿದೆ.
ಮಹಿಳೆ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ ರೇಣುಕಾ ಕಣಬರ್ಗಿ (32) ಮೃತ ಮಹಿಳೆ ಎಂದು ಪೋಲಿಸ್ ಇಲಾಖೆಯ ಪ್ರಾಥಮಿಕ ತನಿಕೆಯಿಂದ ಗುರುತಿಸಲಾಗಿದೆ. ಬೈಲಹೊಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಮುಖ, ತೆಲೆ ಹಾಗೂ ದೇಹದ ಮೇಲೆ ಅಲ್ಲಲ್ಲಿ ಹಲ್ಯಮಾಡಿ ಕೊಲೆಗೈದಿರಬಹುದೆಂಬ ಶಂಕ್ಯೆವ್ಯಕ್ತವಾಗಿದೆ.
ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ಕರುಣಾಕರ್ ಶೆಟ್ಟಿ, ಪಿ.ಎಸ್.ಆಯ್ ಮಂಜುನಾಥ ಹಿರೇಮಠ, ಕಿತ್ತೂರ ಸಿ.ಪಿ.ಆಯ್ ರಾಘವೇಂದ್ರ ಹವಾಲ್ದಾರ, ಪಿ.ಎಸ್.ಆಯ್ ಮಲ್ಲಿಕಾರ್ಜುನ ಕುಲಕರ್ಣಿ ಎ.ಎಸ್.ಆಯ್ ಡಿ.ಬಿ ಈಟಿ ಸೇರಿದಂತೆ ಸಿಬ್ಬಂದಿ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಆರೋಪಿಗಳಿಗೆ ಹುಡಕಾಟಕ್ಕೆ ತನಿಕೆ ಆರಂಭಿಸಿದ್ದಾರೆ.