ಗೋಕಾಕ: ಕೇಂದ್ರ ಸರಕಾರದ ಮಾರ್ಗಸೂಚಿ ಅನುಸಾರ ಲಾಕ್ ಡೌನ್ ಷರತ್ತುಗಳನ್ನು ಸಡಿಲ ಗೊಳಿಸಲಾಗಿದೆ : ಪ್ರಕಾಶ ಹೋಳೆಪ್ಪಗೋಳ
ಕೇಂದ್ರ ಸರಕಾರದ ಮಾರ್ಗಸೂಚಿ ಅನುಸಾರ ಲಾಕ್ ಡೌನ್ ಷರತ್ತುಗಳನ್ನು ಸಡಿಲ ಗೊಳಿಸಲಾಗಿದೆ : ಪ್ರಕಾಶ ಹೋಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೆ 3 :
ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ(ಆರೇಂಜ್ ಝೋನ್)ದಲ್ಲಿ ಗುರುತಿಸಲ್ಪಟ್ಟಿರುತ್ತದೆ. ಈ ವಲಯಕ್ಕೆ ಅನ್ವಯವಾಗುವ ಮಾರ್ಗಸೂಚಿ ಅನುಸಾರ ಲಾಕ್ ಡೌನ್ ಷರತ್ತುಗಳನ್ನು ಸಡಿಲ ಗೊಳಿಸಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಿತ್ತಳೆ ವಲಯದಲ್ಲಿ ಅನುಸರಿಸಬೇಕಾದ ನಿಯಮಾವಳಿಗಳ ಪ್ರಕಾರ ಬೆಳಿಗ್ಗೆ 7.00 ರಿಂದ ಸಂಜೆ 7.00ರ ವರೆಗೆ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳು ಮತ್ತು ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಹೋಟೆಲ್ ಕಿಚನ್ ತೆರೆಯಲು ಮಾತ್ರ ಅವಕಾಶ ಇದ್ದು, ಬಾರ್ ರೆಸ್ಟೋರೆಂಟ್ ಮತ್ತು ಲಾಡ್ಜ್ ಗಳಿಗೆ ಅನುಮತಿ ಇರುವುದಿಲ್ಲ. ಎಲ್ಲ ಖಾಸಗಿ ಪ್ಯಾಸೆಂಜರ್ ವೆಹಿಕಲಗಳು, ಜಿಮ್, ಸ್ವಿಮ್ಮಿಂಗ್ ಪೂಲ್, ಎಲ್ಲ ತರಹದ ಸ್ಪೋರ್ಟ್ಸ್, ಚಿತ್ರ ಮಂದಿರಗಳು, ಪಬ್ಲಿಕ್ ಗ್ಯಾದರಿಂಗ್ ಗಳಿಗೆ ಅವಕಾಶ ಇರುವುದಿಲ್ಲ. ಸ್ಕೂಲ್ ಮತ್ತು ಕಾಲೇಜುಗಳು ತೆರೆಯುವುದಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಈಗ ಇದ್ದಂತೆ ಯಥಾ ಸ್ಥಿತಿ ಮುಂದುವರೆಯುತ್ತದೆ. ಸಾರಾಯಿ ಅಂಗಡಿಗಳಲ್ಲಿ ಪಾರ್ಸಲ್ ಒಯ್ಯಲು ಮಾತ್ರ ಅವಕಾಶ ಇರುತ್ತದೆ.
ಅನವಶ್ಯಕವಾಗಿ ಸಾರ್ವಜನಿಕರು ಹೊರಗಡೆ ಬರದಿರಲು ಮತ್ತು 60 ವರ್ಷ ಮೇಲ್ಪಟ್ಟ ವ್ಯಕ್ತಿಗಳ ಹಾಗೂ ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು .
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ತಪ್ಪದೇ ಮಾಸ್ಕ್ ಧರಿಸುವುದು ಹಾಗೂ ಇತರೆ ಲಾಕ್ ಡೌನ್ ನಿಯಮಾವಳಿಗಳನ್ನು ಪಾಲಿಸಲಬೇಕು ಎಂದು ತಹಶೀಲ್ದಾರ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ .