ಗೋಕಾಕ:ದಿ. ಲಕ್ಷ್ಮಣರಾವ ರಾ ಜಾರಕಿಹೊಳಿ ಪುಣ್ಯ ಸ್ಮರಣೆ ನಿಮಿತ್ಯ ರಕ್ತ ದಾನ ಶಿಬಿರ
ದಿ. ಲಕ್ಷ್ಮಣರಾವ ರಾ ಜಾರಕಿಹೊಳಿ ಪುಣ್ಯ ಸ್ಮರಣೆ ನಿಮಿತ್ಯ ರಕ್ತ ದಾನ ಶಿಬಿರ
ಗೋಕಾಕ ಡಿ 31 : ದಿ. ಲಕ್ಷ್ಮಣರಾವ ರಾ ಜಾರಕಿಹೊಳಿ ಅವರ 6ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಪ್ರತಿವರ್ಷದಂತೆ ರಕ್ತ ದಾನ ಶಿಬಿರ ಕಾರ್ಯಕ್ರಮ ರವಿವಾರದಂದು ರೋಟರಿ ರಕ್ತ ಭಂಡಾರದಲ್ಲಿ ಜರುಗಿತು.
ದಿ. ಲಕ್ಷ್ಮಣರಾವ ಜಾರಕಿಹೊಳಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದ ನಾಗರಗಾಳಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರುತಿ ಪಾತ್ರೂಟ ಕರವೇ ಕೇವಲ ಹೋರಾಟಗಳಿಗೆ ಸೀಮಿತವಾಗದೇ ಸ್ವಚ್ಛತಾಕಾರ್ಯಕ್ರಮ ಜನಜಾಗೃತಿ ಕಾರ್ಯಕ್ರಮ ಹಾಗೂ ಸತತ 6 ವರ್ಷಗಳಿಂದ ಪುಣ್ಯ ಸ್ಮರಣೆಯ ನಿಮಿತ್ಯ ಆಯೋಜಿಸುತ್ತಿರವ ರಕ್ತದಾನ ಶಿಬಿರ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರವೇ ಅಧ್ಯಕ್ಷ ಕಿರಣ ಡಮಾಮಗರ, ದಿ. ಲಕ್ಷ್ಮಣರಾವ ಜಾರಕಿಹೊಳಿ ಅವರ ಗೋಕಾವಿ ನಾಡಿನ ಧಿಮಂತ ನಾಯಕರಾಗಿದ್ದು, ಬಡವರ, ದಿನದಲಿತರಿಗೆ ಕೊಡುಗೈ ಧಾನಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಅವರ ಮಕ್ಕಳು ಗೋಕಾವಿ ನಾಡಿನ ಸರ್ವತೋಮುಖ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ದಿ.ಲಕ್ಷ್ಮಣರಾವ ಜಾರಕಿಹೊಳಿ ಅವರ ಜೀವನ ನಮಗೆಲ್ಲ ಮಾರ್ಗದರ್ಶನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಿ.ಲಕ್ಷ್ಮಣರಾವ ಜಾರಕಿಹೊಳಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುರೇಶ ಕಾಮೇವಾಡಿ, ಪುಂಡಲಿಕ ತಿಗಡಿ, ಬಸವರಾಜ ಆಶಿ, ಸಿದ್ಧಲಿಂಗಯ್ಯ ಹಿರೇಮಠ, ಸುಭಾಷ ಕಾಮೇವಾಡಿ, ಮಲ್ಲಪ್ಪ ಪಾಶ್ಚಾಪೂರ, ಗಿರೀಶ ಪಾಟೀಲ, ವಿನೋದ ಕೆಂಚನ್ನವರ, ಬಸವರಾಜ ಹೊಸುರ, ಬಾಳೇಶ ನಾಯ್ಕ, ಸುರೇಶ ವಗ್ಗನವರ, ಮಾಯಪ್ಪ ಬೇಣಚಿಮರ್ಡಿ, ಗೋಪಾಲ ಉಡಿನಾರ, ಶಿವಯ್ಯ ಹಿರೇಮಠ, ಕಲ್ಲಯ್ಯ ಮಠಪತಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.