RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಕನ್ನಡವೇ ನಿತ್ಯ ಸಾಮಾಜಿಕ ಜಾಲತಾಣದ ನೇರ ಪ್ರಸಾರ ಕಾರ್ಯಕ್ರಮಕ್ಕೆ ಮುರುಘರಾಜೇಂದ್ರ ಶ್ರೀ ಚಾಲನೆ

ಗೋಕಾಕ:ಕನ್ನಡವೇ ನಿತ್ಯ ಸಾಮಾಜಿಕ ಜಾಲತಾಣದ ನೇರ ಪ್ರಸಾರ ಕಾರ್ಯಕ್ರಮಕ್ಕೆ ಮುರುಘರಾಜೇಂದ್ರ ಶ್ರೀ ಚಾಲನೆ 

ಕನ್ನಡವೇ ನಿತ್ಯ ಸಾಮಾಜಿಕ ಜಾಲತಾಣದ ನೇರ ಪ್ರಸಾರ ಕಾರ್ಯಕ್ರಮಕ್ಕೆ ಮುರುಘರಾಜೇಂದ್ರ ಶ್ರೀ ಚಾಲನೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 16 :

 

 

ಮನೆಯಲ್ಲಿಯೇ ಕುಳಿತು ಕೊಂಡು ನಾಡಿನ ಬಗ್ಗೆ ,ನಾಡಿನ ಸಾಹಿತ್ಯದ ಬಗ್ಗೆ , ವಚನಗಳ ಬಗ್ಗೆ ಚಿಂತನೆಗಳ ಹುಟ್ಟು ಹಾಕುವ ಕೆಲಸಕ್ಕೆ ಕೈ ಹಾಕಿರುವ ಕರವೇಯ ಕಾರ್ಯ ಶ್ಲಾಘನೀಯ ಎಂದು ಶೂನ್ಯ ಸಂಪಾದನ ಮಠದ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು

ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಕರವೇ ಹಮ್ಮಿಕೊಂಡಿದ್ದ ಕನ್ನಡವೇ ನಿತ್ಯ ಸಾಮಾಜಿಕ ಜಾಲತಾಣದ ನೇರ ಪ್ರಸಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

ಇಂದಿನ ಯುವಕರಿಗೆ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಿರುವ ಕನ್ನಡ ನಾಡಿನ ಖ್ಯಾತ ಸಾಹಿತಿ ದಿಗ್ಗಜರನ್ನು ಪರಿಚಯಿಸುವ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ವಿನೂತನ ನೇರ ಪ್ರಸಾರ ಕಾರ್ಯಕ್ರಮವನ್ನು ಸಂಘಟಿಸಿದ್ದು ಸಂತೋಷದ ಸಂಗತಿಯಾಗಿದ್ದು , ಲಾಕಡೌನ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತುಕೊಂಡು ಈ ಕಾರ್ಯಕ್ರಮ ವಿಕ್ಷೀಸಲು ಅನುವು ಮಾಡಿ ಕೊಟ್ಟ ಕರವೇಯ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮನೆಯಲ್ಲೇ ಕುಳಿತು ಕೊರೋನಾ ರೋಗವನ್ನು ಗೆಲುವು ನಿಟ್ಟಿನಲ್ಲಿ ಕಳೆದ 24 ದಿನಗಳಿಂದ ಇಡೀ ದೇಶವೇ ಹೋರಾಡುತ್ತಿದ್ದೆ . ಎರಡನೇ ಹಂತದ ಲಾಕಡೌನನ್ನು ಯಶಸ್ವಿಯಾಗಿ ಪೂರೈಸುವ ದಿಸೆಯಲ್ಲಿ ಎಲ್ಲರೂ ಪ್ರಧಾನಿ ಅವರು ಹೇಳಿದ ಎಲ್ಲ ಕಟ್ಟಪ್ಪಣೆಗಳನ್ನು ಪಾಲಿಸಬೇಕು. ಈ ದಿನಗಳಲ್ಲಿ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕರವೇಯಿಂದ ದಿನಕ್ಕೊಂದು ಸಾಹಿತಿ ದಿಗ್ಗಜರ ಬದುಕು ಬರಹಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಕನ್ನಡವೇ ನಿತ್ಯ ಎಂಬ ನೇರ ಪ್ರಸಾರ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಲ್ಲರೂ ಮನೆಯಲ್ಲಿಯೇ ಇದ್ದು, ನೇರ ಪ್ರಸಾರ ಕಾರ್ಯಕ್ರಮವನ್ನು ವಿಕ್ಷೀಸಿ ಪುನಿತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಸಾದಿಕ ಹಲ್ಯಾಳ ನಿರೂಪಿಸಿ ವಂದಿಸಿದರು.ಮೊದಲನೇ ದಿನದ ನೇರ ಪ್ರಸಾರ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ 1000 ಕ್ಕೂ ಹೆಚ್ಚು ಜನ ವಿಕ್ಷೀಸಿದರು 

Related posts: