RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಕೊರೋನಾ ಹಿನ್ನೆಲೆ: ಗೋಕಾಕ ನರಗದಲ್ಲಿ ಡ್ರೋಣ್ ಕಣ್ಗಾವಲು

ಗೋಕಾಕ:ಕೊರೋನಾ ಹಿನ್ನೆಲೆ: ಗೋಕಾಕ ನರಗದಲ್ಲಿ ಡ್ರೋಣ್ ಕಣ್ಗಾವಲು 

ಕೊರೋನಾ ಹಿನ್ನೆಲೆ: ಗೋಕಾಕ ನರಗದಲ್ಲಿ ಡ್ರೋಣ್ ಕಣ್ಗಾವಲು

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 16 :

 

 

ಎರಡನೆಯ ಹಂತದ ಲಾಕಡೌನ ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸ ಇಲಾಖೆಯವರು ಗುರುವಾರದಂದು ನಗರದಾದ್ಯಂತ ಡ್ರೋಣ ಕ್ಯಾಮೆರಾ ಹಾರಾಟ ನಡೆಯಿಸಿ ಸಾರ್ವಜನಿಕರು ವಿನಾಕಾರಣ ಹೊರಬರದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು

ನಗರದ ಕುರುಬರ ಪೂಲ್, ಗುರುವಾರ ಪೇಠದಲ್ಲಿ ಹಾರಿಬಿಟ್ಟ ಡ್ರೋಣ ಕ್ಯಾಮೆರಾದಿಂದ ನಗರ ಆದಿಜಾಂಬವ ನಗರ, ಬಾಪನಾ ಚೌಕ, ಸಂಗೋಳ್ಳಿ ರಾಯಣ್ಣ ವೃತ್ತ, ಬ್ಯಾಳಿಕಾಟ್, ಕುಂಬಾರ ಓಣಿ, ಉಪ್ಪಾರ ಗಲ್ಲಿ , ಡೋರಗಲ್ಲಿ , ಮಿನಿನ ಮಾರ್ಕೆಟ್, ಮೊಮಿನ ಗಲ್ಲಿ ಸೇರಿದಂತೆ ನಗರದ ಜನನಿಬಿಡು ಪ್ರದೇಶಗಳನ್ನು ಚಿತ್ರೀಕರಿಸಲಾಯಿತು. ಡ್ರೋಣ್ ಆಕಾಶದಲ್ಲಿ ಹಾರಾಡುವದನ್ನು ಕಂಡು ವಿನಾಕಾರಣ ರಸ್ತೆಗಳಲ್ಲಿ ತಿರುಗಾಡುತ್ತಿದ್ದವರು ಓಡಿ ಮನೆಗಳನ್ನು ಸೇರಿಕೊಂಡರು.
ನಗರದ ಎಲ್.ಡಿ.ಎಸ್.ನ ಮಾಲೀಕ ವಿಡಿಯೋಗ್ರಾಫರ ಶಂಕರ ಯಮಕನಮರಡಿ ಡ್ರೋಣ ಹಾರಾಟ ನಡೆಸಲು ಪೊಲೀಸ ಇಲಾಖೆಗೆ ಸಹಕಾರ ನೀಡಿದರು .

Related posts: