RNI NO. KARKAN/2006/27779|Saturday, February 14, 2026
You are here: Home » breaking news » ಅಂಕಲಗಿ : ಲಾಕ್ಡೌನ್ ಹಿನ್ನೆಲೆ : ಅಂಕಲಗಿ ಜಾತ್ರೆ ರದ್ದು. ಮುಂದೂಡಿಕೆ

ಅಂಕಲಗಿ : ಲಾಕ್ಡೌನ್ ಹಿನ್ನೆಲೆ : ಅಂಕಲಗಿ ಜಾತ್ರೆ ರದ್ದು. ಮುಂದೂಡಿಕೆ 

ಲಾಕ್ಡೌನ್ ಹಿನ್ನೆಲೆ : ಅಂಕಲಗಿ ಜಾತ್ರೆ ರದ್ದು. ಮುಂದೂಡಿಕೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಅಂಕಲಗಿ. 08.-

 

 

ಮಹಾ ಮಾರಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಮತ್ತು ಲಾಕ್ ಡೌನ್ ಹಿನ್ನೆಲೆಯಿಂದ ಸುಪ್ರಸಿದ್ಧ ಅಂಕಲಗಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮದೇವತೆಯರಾದ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ಶ್ರೀ ದ್ಯಾಮವ್ವದೇವಿಯರ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಅತೀ ವಿಜೃಂಭಣೆಯಿಂದ ಜರುಗುವ ಐದು ದಿನಗಳವರೆಗಿನ ಈ ಜಾತ್ರೆಯು, ಸೋಮವಾರ ದಿ. 13-4-2020ರಿಂದ ಶುಕ್ರವಾರ ದಿ.17-4-2020 ರವರೆಗೆ ಆಯೋಜಿಸಲಾಗಿತ್ತಲ್ಲದೆ, ಜಾತ್ರೆಗೆ ಪೂರಕವಾದ ಎಲ್ಲ ಅಗತ್ಯ ಪೂರ್ವ ಸಿದ್ಧತೆಗಳೆಲ್ಲವನ್ನೂ ಪೂರ್ಣಗೊಳಿಸಲಾಗಿತ್ತು. ಜಾತ್ರೆ ರದ್ದಾದ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹಗಳೂ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ್ದು, ಪ್ರಸಕ್ತ ಜಾತ್ರೆಯನ್ನು ಮುಂದಿನ 2 ವರ್ಷಕ್ಕೆ ಮುಂದೂಡಲಾಗಿದೆ, ಎಂದು ಜಾತ್ರಾ ಪಂಚ ಕಮೀಟಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

Related posts: