ಗೋಕಾಕ:ಹೊನಲು-ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟ್ ಬಿಸುವ ಮೂಲಕ ಚಾಲನೆ ನೀಡಿದ ಯುವ ನಾಯಕ ರಾಹುಲ್

ಹೊನಲು-ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟ್ ಬಿಸುವ ಮೂಲಕ ಚಾಲನೆ ನೀಡಿದ ಯುವ ನಾಯಕ ರಾಹುಲ್
ಗೋಕಾಕ ಫೆ 16 : ಇಲ್ಲಿನ ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ನಗರದ ಶ್ರೀ ವಾಲ್ಮೀಕಿ ಮರ್ಹಷಿ ಕ್ರೀಡಾಂಗಣದಲ್ಲಿ ಆಯೋಸಿದ್ದ ರಾಜ್ತ ಮಟ್ಟದ ರಾಹುಲ್ ಟ್ರೋಫಿ 2024 ಹೊನಲು-ಬೆಳಕಿನ ಟೆನಿಸಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಗುರುವಾರ ಸಾಂಯಕಾಲ ಯುವ ನಾಯಕ ರಾಹುಲ್ ಜಾರಕಿಹೊಳಿ ಬ್ಯಾಟ್ ಬಿಸುವ ಮೂಲಕ ಚಾಲನೆ ನೀಡಿ ಆಟಗಾರರಿಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಹಶೀಲ್ದಾರ ಡಾ.ಮೋಹನ ಭಸ್ಮೆ ಮಾತನಾಡಿ ನಗರದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಟೂರ್ನಿ ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡಾಪಟುಗಳು ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿ ಮೆರೆಯಬೇಕು ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇದಕ್ಕೆ ಸಹಕಾರ ನೀಡುತ್ತಿರುವ ಸಚಿವ ಸತೀಶ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ ಎಂದ ಅವರು ಕ್ರೀಡೆಗಳು ಹೆಚ್ಚು ಹೆಚ್ಚು ಆಯೋಜನೆಯಾಗುವ ಮೂಲಕ ಹೆಚ್ಚು ಕ್ರೀಡಾಪಟುಗಳನ್ನು ಸೃಷ್ಟಿಸಬೇಕೆಂದು ಕಿವಿ ಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಾತನಾಡಿ,ಸಚಿವ ಸತೀಶ ಜಾರಕಿಹೊಳಿ ಅವರು ತಮ್ಮ ಹಿಂದಿನ ಕ್ರೀಡಾ ಚಟುವಟಿಕೆಗಳ ದಿನಗಳನ್ನು ಸ್ಮರಿಸಿಕೊಂಡು ಯುವ ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಎಂಬ ಮಹತ್ತರ ಉದ್ದೇಶದಿಂದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ಲಡಲೈಟ್ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ರಂಗದ ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತೋರ್ಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಿ.ವಾಯ್.ಎಸ್.ಪಿ. ಡಿ.ಎಚ್ ಮುಲ್ಲಾ, ಪಿಎಸ್ಐ ಕೆ.ವಾಲಿಕರ, ಹೆಸ್ಕಾಂನ ನಗರ ಶಾಖಾಧಿಕಾರ ಶ್ರೀಧರ ಯಲಿಗಾರ, ರಿಯಾಜ ಚೌಗಲಾ, ಬಸವರಾಜ ಸಾಯನ್ನವರ , ಸಂತೋಷ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.