RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಅಂಗಡಿಕಾರರು ಅನಗತ್ಯವಾಗಿ ಹೆಚ್ಚಿನ ದರ ಪಡೆದರೆ ಲೈಸೆನ್ಸನ್ನು ರದ್ದು : ಪ್ರಕಾಶ ಹೋಳೆಪ್ಪಗೋಳ

ಗೋಕಾಕ:ಅಂಗಡಿಕಾರರು ಅನಗತ್ಯವಾಗಿ ಹೆಚ್ಚಿನ ದರ ಪಡೆದರೆ ಲೈಸೆನ್ಸನ್ನು ರದ್ದು : ಪ್ರಕಾಶ ಹೋಳೆಪ್ಪಗೋಳ 

ಅಂಗಡಿಕಾರರು ಅನಗತ್ಯವಾಗಿ ಹೆಚ್ಚಿನ ದರ ಪಡೆದರೆ ಲೈಸೆನ್ಸನ್ನು ರದ್ದು : ಪ್ರಕಾಶ ಹೋಳೆಪ್ಪಗೋಳ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 29 :

 

ಗೋಕಾಕ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ದಿನಸಿ ಹಾಗೂ ಅಗತ್ಯ ವಸ್ತುಗಳ ಬಗ್ಗೆ ಕೆಲವು ಅಂಗಡಿಗಳಲ್ಲಿ ತಾತ್ಕಾಲಿಕ ಕೊರತೆ ಸೃಷ್ಟಿಸುತ್ತಿರುವ ಬಗ್ಗೆ ಮತ್ತು ಅನಗತ್ಯವಾಗಿ ಹೆಚ್ಚಿನ ದರಗಳನ್ನು ಪಡೆಯುತ್ತಿರುವ ಬಗ್ಗೆ ತಿಳಿದು ಬಂದಿದೆ.

ಇಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ತರಹ ಪರಿಸ್ಥಿತಿಯ ಲಾಭ ಪಡೆದು ಗ್ರಾಹಕರನ್ನು ವಂಚಿಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಆದ್ದರಿಂದ ತಾಲೂಕಿನ ಎಲ್ಲ ಅಂಗಡಿಕಾರರು ಯಾವುದೇ ರೀತಿ ತಾತ್ಕಾಲಿಕ ಕೊರತೆ ಸೃಷ್ಟಿಸುವುದಾಗಲಿ ಅಥವಾ ಅನಗತ್ಯವಾಗಿ ಹೆಚ್ಚಿನ ದರಗಳನ್ನು ಪಡೆಯುತ್ತಿರುವ ಬಗ್ಗೆ ತಿಳಿದು ಬಂದಲ್ಲಿ, ಇದನ್ನು ಗಂಭೀರವಾಗಿ ಪರಿಗಣಿಸಿ, ಅವರ ಅಂಗಡಿಯ ಮಾರಾಟದ ಲೈಸೆನ್ಸನ್ನು ರದ್ದುಗೊಳಿಸಿ, ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ.

Related posts: