RNI NO. KARKAN/2006/27779|Monday, July 14, 2025
You are here: Home » breaking news » ಗೋಕಾಕ:ಕೊರೋನಾ ವೈರಸ್ ತಡೆಗಟ್ಟಲು ಸಾರ್ವಜನಿಕರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಗೋಕಾಕ:ಕೊರೋನಾ ವೈರಸ್ ತಡೆಗಟ್ಟಲು ಸಾರ್ವಜನಿಕರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ 

ಕೊರೋನಾ ವೈರಸ್ ತಡೆಗಟ್ಟಲು ಸಾರ್ವಜನಿಕರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 29 :

 

 

ಕೊರೋನಾ ವೈರಸ್ ತಡೆಗಟ್ಟಲು ಸಾರ್ವಜನಿಕರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕೆಂದು ಯಮಕನಮರಡಿ ಶಾಸಕ , ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು

ರವಿವಾರದಂದು ಲಾಕಡೌನ ಸ್ಥಿತಿಗತಿ ಅರಿಯಲು ನಗರದಲ್ಲಿ ಸಂಚರಿಸಿ ತಮ್ಮ ಗೃಹ ಕಛೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು ಅವರು ಜನರ ಮೇಲೆ ಬಲಪ್ರಯೋಗ ಮಾಡದೆ ಭಯಾನಕ ಕರೋನಾ ವೈರಸ ಬಗ್ಗೆ ಜಾಗೃತಿ ಮೂಡಿಸಿ ಅವರು ಮನೆಯಲ್ಲಿಯೇ ಇದ್ದು ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಅರಿವು ಮೂಡಿಸಬೇಕಾಗಿದೆ ಜೀವನ ಅವಶ್ಯಕ ವಸ್ತುಗಳನ್ನು ಅವರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು ನಾವು ಈ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಯಮಕನಮರಡಿ ಮತ್ತು ಗೋಕಾಕ ನಗರದಲ್ಲಿ ಜನರಲ್ಲಿ ಅರಿವು ಮೂಡಿಸುವದರೊಂದಿಗೆ 10 ಸಾವಿರ ಮಾಸ್ಕಗಳನ್ನು ಜನರಿಗೆ ವಿತರಿಸುತ್ತಿದ್ದೇವೆ‌ ಎಲ್ಲರೂ ತಾಳ್ಮೆ ಹಾಗೂ ಧೈರ್ಯದಿಂದ ಈ ಸಮಸ್ಯೆಯನ್ನು ಎದುರಿಸೋಣಾ ಎಂದು ಸತೀಶ ಜಾರಕಿಹೊಳಿ ಅವರು ಹೇಳಿದರು

Related posts: