ಗೋಕಾಕ:ಪ್ರಕಾಶ ಕರನಿಂಗ ನೇತೃತ್ವದಲ್ಲಿ ಕೊಣ್ಣೂರನಲ್ಲಿ ಹಸಿರು ಗೋಕಾಕಗಾಗಿ ಕಾರ್ಯಕ್ರಮ ಆಚರಣೆ
ಪ್ರಕಾಶ ಕರನಿಂಗ ನೇತೃತ್ವದಲ್ಲಿ ಕೊಣ್ಣೂರನಲ್ಲಿ ಹಸಿರು ಗೋಕಾಕಗಾಗಿ ಕಾರ್ಯಕ್ರಮ ಆಚರಣೆ
ಗೋಕಾಕ ಅ 13: ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಕೊಣ್ಣೂರಿನ ಪುರಸಭೆಯ ಸದಸ್ಯರಾದ ಪ್ರಕಾಶ ಕರನಿಂಗ ಇವರ ನೇತೃತ್ವದಲ್ಲಿ ಕೊಣ್ಣೂರು ಪಟ್ಟಣದ ಅಂಬಿಗರ ಸಮಾಜದ ಸ್ಮಶಾನದಲ್ಲಿ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ ಮತ್ತು ಗ್ರಾಮದ ವಿವಿಧ ಸಂಘಟನೆಗಳು ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 2000 ಸಸಿಗಳನ್ನು ನೆಡಲಾಯಿತು
ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ವಿನೋದ ಕರನಿಂಗ, ಕೆಂಪಣ್ಣ ಕೋಳಿ, ಕೆಂಪಣ್ಣಾ ಕಂಗಳವರ, ತಮ್ಮಣ್ಣ ಚಿಗರಿ, ದುಂಡಪ್ಪ ಮರೆನ್ನವರ, ವಿಠ್ಠಲ ಗೌರನ್ನವರ, ರಾಮಚಂದ್ರ ಹಟ್ಟಿ ಅರಣ್ಯಾಧಿಕಾರಿಗಳಾದ ಎಸ್.ಎಮ್. ನಾಯಿಕ, ಬಿ.ಆರ್.ಓಜಪ್ಪಗೋಳ ಸೇರಿದಂತೆ ಮತ್ತಿತರು ಉಪಸ್ಥಿತರಿದರು