RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ಪ್ರವೇಶ ಪರೀಕ್ಷಾ ಕೇಂದ್ರಗಳಿಗೆ ಚಿಕ್ಕೋಡಿ ಡಿ.ಡಿ.ಪಿ‌.ಐ ಗಜಾನನ ಮನ್ನಿಕೇರಿ ಭೇಟಿ

ಗೋಕಾಕ:ಪ್ರವೇಶ ಪರೀಕ್ಷಾ ಕೇಂದ್ರಗಳಿಗೆ ಚಿಕ್ಕೋಡಿ ಡಿ.ಡಿ.ಪಿ‌.ಐ ಗಜಾನನ ಮನ್ನಿಕೇರಿ ಭೇಟಿ 

ಪ್ರವೇಶ ಪರೀಕ್ಷಾ ಕೇಂದ್ರಗಳಿಗೆ ಚಿಕ್ಕೋಡಿ ಡಿ.ಡಿ.ಪಿ‌.ಐ ಗಜಾನನ ಮನ್ನಿಕೇರಿ ಭೇಟಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 15 :

 

ಆರ್.ಎಮ್.ಎಸ್.ಎ. ಆದರ್ಶ ವಿದ್ಯಾಲಯ ಖನಗಾಂವ ಶಾಲೆಯ 6 ನೇ ತರಗತಿ ಪ್ರವೇಶ ಪರೀಕ್ಷಾ ಕೇಂದ್ರಗಳಿಗೆ ಚಿಕ್ಕೋಡಿ ಡಿ.ಡಿ.ಪಿ‌.ಐ ಗಜಾನನ ಮನ್ನಿಕೇರಿ ಹಾಗೂ ಡಯಟ್ ಪ್ರಾಚಾರ್ಯ ಮೋಹನ್ ಜಿರಿಗ್ಯಾಳ ಭೇಟಿ ನೀಡಿ ಪರಿಶೀಲಿಸಿದರು
ರವಿವಾರದಂದು ನಿಗದಿತ ವೇಳಾಪಟ್ಟಿಯಂತೆ ನಡೆದ ಆರ್.ಎಮ್.ಎಸ್.ಎ. ಆದರ್ಶ ವಿದ್ಯಾಲಯ ಖನಗಾಂವ ಶಾಲೆಯ 6 ನೇ ತರಗತಿ ಪ್ರವೇಶ ಪರೀಕ್ಷೆ ನಗರದ ಆರು ಕೇಂದ್ರಗಳಲ್ಲಿ ಸುಸೂತ್ರವಾಗಿ ಜರುಗಿದವು , ಒಟ್ಟು 1890 ವಿದ್ಯಾಗಳಲ್ಲಿ 85 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರೆ ಉಳಿದ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ
ಉಳಿದಂತೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಯಾವದೇ ತೊಂದರೆ ಆಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೋಳ್ಳಲಾಗಿತ್ತು. ಪರೀಕ್ಷೆಗೆ ಪೂರಕವಾದಂತಹ ಎಲ್ಲ ಸೌಲಭ್ಯಗಳನ್ನು ಕಂಡು ಪರೀಕ್ಷೆಯ ಉಸ್ತುವಾರಿ ನೋಡಿಕೊಂಡ ಹಿರಿಯ ಅಧಿಕಾರಿಗಳಾದ ಡಿಡಿಪಿಐ ಗಜಾನನ ಮನ್ನಿಕೇರಿ ಮತ್ತು ಡಯಟ್ ಪ್ರಾಚಾರ್ಯ ಮೋಹನ ಜೀರಗ್ಯಾಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ

Related posts: