ಬೆಟಗೇರಿ:ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕರಿಗೆ ಸಹಾಯಧನ ನೀಡುವ ಕಾರ್ಯ ನಡೆಯಲಿದೆ
ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕರಿಗೆ ಸಹಾಯಧನ ನೀಡುವ ಕಾರ್ಯ ನಡೆಯಲಿದೆ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮಾ 14 :
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಶಾಲಾ ಮಕ್ಕಳಿಗೆ, ವಿವಿಧ ವಲಯದ ಸಾಧಕರಿಗೆ ಸಹಾಯ ನೀಡುವುದೇ ಮಮದಾಪೂರ ಗ್ರಾಮದ ಶ್ರೀ ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್‍ನ ಧ್ಯೇಯೋದ್ಧೇಶವಾಗಿದೆ ಎಂದು ಗೋಕಾಕ ಜಿಇಎಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಎಮ್.ವಾಲಿ ಹೇಳಿದರು.
ಸಮೀಪದ ಮಮದಾಪೂರ ಗ್ರಾಮದಲ್ಲಿ ಗುರುವಾರ ಮಾರ್ಚ.12 ರಂದು ನಡೆದ ಶ್ರೀ ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ಚೇತನ ಪ್ರೇರಣಾ ಸ್ಪರ್ಧೆ, ಸಹಾಯಧನ ವಿತರಣಾ ಸಮಾರಂಭದ ಮುಖ್ಯಅತಿಥಿಗಳಾಗಿ ಮಾತನಾಡಿ, ಪ್ರತಿ ವರ್ಷ ದಿ.ಚೇತನ ಕೊಣ್ಣೂರ ಜನ್ಮ ದಿನದ ಪ್ರಯುಕ್ತ ಇಲ್ಲಿಯ ಶ್ರೀ ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವಿಧ ವಲಯದ ಸಾಧಕರಿಗೆ ಸಹಾಯಧನ ನೀಡುವ ಕಾರ್ಯ ನಡೆಯಲಿದೆ ಎಂದರು.
ಗ್ರಾಮದ ಶ್ರೀ ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಈರಪ್ಪ ಕೊಣ್ಣೂರ, ಶಿವು ಜನ್ಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮುಖಂಡ ಚಂದ್ರಶೇಖರ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಚರಮೂರ್ತೇಶ್ವರ ಸ್ವಾಮಿಜಿ ಸಾನಿಧ್ಯ, ಶಾಂತಾರೂಢ ಸ್ವಾಮಿಜಿ ಸಮ್ಮುಖ ವಹಿಸಿ ಟ್ರಸ್ಟ್ ಮತ್ತು ಸಮಾರಂಭ ಉದ್ಘಾಟನೆ ನೆರವೇರಿಸಿದರು.
ಪ್ರಾಥಮಿಕ ಶಾಲೆಯ 5 ನೇ ತರಗತಿ ಮಕ್ಕಳಿಗೆ ಜಿಲ್ಲಾ ಮಟ್ಟದ ಚೇತನ ಪ್ರೇರಣಾ ಸ್ಪರ್ಧೆ ಆಯೋಜಿಸಿ, ವಿಜೇತರಾದವರಿಗೆ ಬಹುಮಾನ ಮತ್ತು ವಿವಿಧ ವಲಯದ ಸಾಧಕರಿಗೆ ಸಹಾಯಧನ ವಿತರಣೆ, ಹಾಗೂ ಗಣ್ಯರು, ಅತಿಥಿ ಮಹೋದಯರಿಗೆ, ಶ್ರೀಗಳಿಗೆ ಸತ್ಕಾರ ಜರುಗಿತು.
ಅಶೋಕ ತೋಟಗಿ, ಎಂ.ಆರ್.ತ್ಯಾನಗಿ, ಎಂ.ಬಿ.ಕೊಣ್ಣೂರ, ಸ್ಥಳೀಯ ಶ್ರೀ ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಶಾಲಾ ವಿದ್ಯಾರ್ಥಿಗಳು, ವಿವಿಧ ವಲಯದ ಸಾಧಕರು, ದಿ.ಚೇತನ ಕೊಣ್ಣೂರ ಗೆಳೆಯರ ಬಳಗದ ಸದಸ್ಯರು, ಗ್ರಾಮಸ್ಥರು, ಇತರರು ಇದ್ದರು.