ಗೋಕಾಕ:ನೆಲಕಚ್ಚಿದ ಕೋಳಿ ಮಾಂಸದ ದರ : 6500 ಕೋಳಿಗಳ ಮಾರಣಹೋಮ, ಲೋಳಸೂರದಲ್ಲಿ ಘಟನೆ
ನೆಲಕಚ್ಚಿದ ಕೋಳಿ ಮಾಂಸದ ದರ : 6500 ಕೋಳಿಗಳ ಮಾರಣಹೋಮ, ಲೋಳಸೂರದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 10 :
ಕೊರೊನಾ ವೈರಸ್ ಇಫೆಕ್ಟ್ ದಿಂದ ಕೋಳಿ ಮಾಂಸದ ದರ ನೆಲೆ ಕಚ್ಚಿರುವ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದ ಪೋಟ್ರಿಫಾರ್ಮನ ಮಾಲಿಕ ರೊಬ್ಬರು ಕೋಳಿಗಳನ್ನು ಜೀವಂತ ಹುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಸೋಮವಾರದಂದು ತಾಲೂಕಿನ ಲೋಳಸೂರ ಗ್ರಾಮದ ನಜೀರ ಮಕಾಂದಾರ ಎಂಬುವವರು ಕರೋನಾ ವೈರಸ್ ಭಯದಿಂದ ಖರೀದಿದಾರರು ಇಲ್ಲದರಿಂದ ತಮ್ಮ ಸ್ವಂತ ಹೊಲದಲ್ಲಿ 65,00 ಕ್ಕೂ ಹೆಚ್ಚು ಕೋಳಿಗಳನ್ನು ಗುಂಡಿ ತೆಗೆದು ಹುತ್ತಿದ್ದಾನೆ. ಖರೀರಿದಾರರು ಇಲ್ಲದಿರುವುದು ಮತ್ತು ಬೆಳೆದು ನಿಂತ ಕೋಳಿಗಳ ಆಹಾರಕ್ಕೆ ವೆಚ್ಚ ಮಾಡಲು ಸಾಧ್ಯವಾಗದೇ ಇರುವುದರಿಂದ ಕೋಳಿಗಳ ಮಾರಣಹೋಮ ನಡೆಸಲಾಗಿದೆ ಇದಕ್ಕೆ ಕೊರೊನಾ ಕಾರಣ ಅಲ್ಲ ಎಂದಿರುವ ನಜೀರ ಮಕಾಂದಾರ ಕೊರೊನಾ ಭಯದಿಂದ ಕೋಳಿಗಳಿಗೆ ಬೇಡಿಕೆ ಕುಸಿದಿದೆ. ಒಂದು ಕೆಜಿ ಕೋಳಿ ಮಾಂಸದ ದರ 8 ರಿಂದ 10 ರೂಪಾಯಿಗೆ ಇಳಿದಿದೆ, ಇನ್ನೊಂದೆಡೆ ಪ್ರತಿ ಕೆಜಿ ಕೋಳಿ ಆಹಾರದ ಬೆಲೆ 25 ರಿಂದ 30 ರೂಪಾಯಿ ಇದೆ. ಒಂದು ಕೆಜಿ ಮಾಂಸ ತಯಾರಾಗಬೇಕಾದರೆ 2 ಕೆಜಿ ಆಹಾರ ನೀಡಬೇಕು. ಇದರಿಂದ ಪ್ರತಿ ಕೋಳಿಯ ಹಿಂದೆ 40 ರಿಂದ 50 ರೂಪಾಯಿ ನಷ್ಟವಾಗುತ್ತಿದೆ. ಕೋಳಿ ಖರೀದಿಸುವವರು ಇಲ್ಲದ ಕಾರಣ, ಆಹಾರಕ್ಕೆ ದುಡ್ಡು ಹೊಂದಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಕೋಳಿಗಳನ್ನು ಮಣ್ಣು ಮಾಡುತ್ತಿದ್ದೇನೆ ಎಂದು ನಜೀರ್ ಪತ್ರಿಕೆಗೆ ತಿಳಿಸಿದ್ದಾರೆ.

