RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸಿಂಡಿಕೇಟ್ ಬ್ಯಾಂಕಿನ ಅವ್ಯವಸ್ಥೆಯ ವಿರುದ್ಧ ಸಮತಾ ಸೈನಿಕದಳ ಮತ್ತು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಗೋಕಾಕ:ಸಿಂಡಿಕೇಟ್ ಬ್ಯಾಂಕಿನ ಅವ್ಯವಸ್ಥೆಯ ವಿರುದ್ಧ ಸಮತಾ ಸೈನಿಕದಳ ಮತ್ತು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ 

ಸಿಂಡಿಕೇಟ್ ಬ್ಯಾಂಕಿನ ಅವ್ಯವಸ್ಥೆಯ ವಿರುದ್ಧ ಸಮತಾ ಸೈನಿಕದಳ ಮತ್ತು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಫೆ 4 :

 

ಸ್ಥಳೀಯ ಸಿಂಡಿಕೇಟ್ ಬ್ಯಾಂಕಿನ ಅವ್ಯವಸ್ಥೆಯ ವಿರುದ್ಧ ಸಮತಾ ಸೈನಿಕದಳ ಹಾಗೂ ವಿವಿಧ ದಲಿತ ಮತ್ತು ಕನ್ನಡಪರ ಸಂಘಟನೆಗಳಿಂದ ಬ್ಯಾಂಕಿನ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಮತಾ ಸೈನಿಕದಳ ಗೋಕಾಕ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ, ಘಟಪ್ರಭಾ ಸಿಂಡಿಕೇಟ್ ಬ್ಯಾಂಕ್ ಅವ್ಯವಸ್ಥೆಯ ಆಗರವಾಗಿದೆ. ಸುಮಾರು 40 ವರ್ಷಗಳ ಹಳೆಯ ಮತ್ತು ಕೋಟಿ ಗಂಟಲೇ ವ್ಯವಹಾರ ಹೊಂದಿರುವ ಬ್ಯಾಂಕಿನಲ್ಲಿ ಗ್ರಾಹಕರೊಂದಿಗೆ ಸಿಬ್ಬಂದಿಗಳು ಸಹಕರಿಸುತ್ತಿಲ್ಲ. ಸಾವಿರಾರು ಪಿಂಚಣಿದಾರರು ಈ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ವೃದ್ದರು ತಮ್ಮ ಪಿಂಚಣಿ ಪಡೆಯಲು ಮುಂಜಾನೆಯಿಂದ ಸಂಜೆಯವರೆಗೆ ನಿಲ್ಲಬೇಕಾಗಿದೆ. ಪಾಸಬುಕ್ ಪ್ರಿಂಟರ್ ಕೆಟ್ಟು ವರ್ಷಕಳೆದರೂ ದುರಸ್ತಿಯಾಗಿಲ್ಲ ಕೂಡಲೇ ಮೇಲಾಧಿಕಾರಿಗಳು ಯೋಗ್ಯ ಕ್ರಮ ಕೈಗೊಂಡು ಇಲ್ಲಿನ ಅವ್ಯವಸ್ಥೆಯನ್ನು ಸರಿ ಪಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬ್ರಹತ ಪ್ರತಿಭಟಣೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಮೂಲಕ ಮೇಲಾಧಿಕಾರಿಗಳಿಗೆ ಸಂಘಟನೆಗಳ ಮುಖಂಡರಿಂದ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಸಂಜು ಯಕ್ಸಂಬಿ, ಸುನೀಲ ಕೊಟಬಾಗ, ಶಂಕರ ವಾಘ, ಶಂಕರ ಸಣ್ಣಕ್ಕಿ, ಕೃಷ್ಣಾ ಗಂಡವ್ವಗೊಳ, ಮಂಜುಳಾ ರಾಮಗಾನಟ್ಟಿ, ರಾಘವೇಂದ್ರ ಚಿಂಚಲಿ, ಈಶ್ವರ ನಡುವಿನಮನಿ, ಶ್ರೀಕಾಂತ ಮಹಾಜನ, ಮಾರುತಿ ಮಾದರ, ಭರಮು ಗಾಡಿವಡ್ಡರ, ರಾಜು ಪೀರಜಾದೆ, ವಿಠ್ಠಲ ಗೊರಜೊಪ್ಪಗೋಳ, ಸೇರಿದಂತೆ ಅನೇಕ ವಿವಿಧ ದಲಿತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related posts: