ಘಟಪ್ರಭಾ:ಸಮತಾ ಸೈನಿಕದಳ ವತಿಯಿಂದ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ
ಸಮತಾ ಸೈನಿಕದಳ ವತಿಯಿಂದ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 25 :
ಚಾಲ್ತಿಯಲ್ಲಿರುವ ಘಟಪ್ರಭಾ ಎಡದಂಡೆ ಕಾಲುವೆಯ ನವೀಕರಣ ಕಾಮಗಾರಿ ಸಂದರ್ಭದಲ್ಲಿ ದುರದುಂಡಿ ಸೇತುವೆ ಹತ್ತಿರ ಜನ ಬಳಕೆಗೆ ನಿರ್ಮಿಸಲಾದ ಮಟ್ಟಲುಗಳನ್ನು ತೆಗೆಯಲಾಗಿದ್ದು, ಇದರಿಂದ ಕಾಲುವೇ ತೀರದ ಜನರಿಗೆ ತೀರಾ ತೊಂದರೆ ಆಗುತ್ತಿರುವುದರಿಂದ ಸದರಿ ಮಟ್ಟಲುಗಳನ್ನು ಕೂಡಲೇ ನಿರ್ಮಿಸಬೇಕೆಂದು ಆಗ್ರಹಿ ಸ್ಥಳೀಯ ಸಮತಾ ಸೈನಿಕದಳ ಪಧಾದಿಕಾರಿಗಳು ನೀರಾವರಿ ನಿಗಮ ಜಿ.ಎಲ್.ಬಿ.ಸಿ ವಿಭಾಗ ನಂ.1 ಇದರ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಮೊದಲಿನಿಂದಲು ಘಟಪ್ರಭಾ ಎಡದಂಡೆ ಕಾಲುವೆಯ ಅಕ್ಕ ಪಕ್ಕದ ಸಾವಿರಾರು ಜನರು ಮತ್ತು ರೈತರು ತಮ್ಮ ಬಟ್ಟೆ ಬರೆ ಒಗೆಯಲು ಹಾಗೂ ತಮ್ಮ ಜಾನುವಾರುಗಳನ್ನು ನೀರು ಕುಡಿಸಲು ಮತ್ತು ತೊಳೆಯಲು ಈ ಕಾಲುವ ನೀರನ್ನು ಬಳಸುತ್ತಾರೆ. ಇವರ ಅನುಕೂಲಕ್ಕಾಗಿ ಇಲ್ಲಿ ಮೆಟ್ಟಲುಗಳನ್ನು ನಿರ್ಮಿಸಲಾಗಿತ್ತು, ಆದರೆ ಈಗ ಕಾಲುವೆ ನವೀಕರಣ ಕಾಮಗಾರಿ ಭರದಿಂದ ಸಾಗಿದ್ದರಿಂದ ತರಾ ತುರಿಯಲ್ಲಿ ಇಲ್ಲಿರುವ ಮೆಟ್ಟಲುಗಳನ್ನು ಕಿತ್ತೊಗೆಯಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ನೀರಿನ ರಭಸಕ್ಕೆ ಜನ ಕೊಚ್ಚಿ ಹೋಗಿ ಪ್ರಾಣಾಪಾಯ ಸಂಭವಿದೆ.
ಆದ್ದರಿಂದ ಕೂಡಲೇ ದುರದುಂಡಿ ಸೇತುವೆ ಹತ್ತಿರ ಹಾಗೂ ಇನ್ನೂಳಿದ ಗ್ರಾಮಗಳ ಸಮೀಪದ ವಿರುವ ಕಾಲುವೆಗೆ ಮಟ್ಟಲು ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಯಾವುದೇ ಪ್ರಣ ಹಾಣಿ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕ್ರಮ ಕೈಗೊಳ್ಳದೇ ಹೋದಲ್ಲಿ ಇಲ್ಲಿ ಸಂಭವಿಸುವ ಅನಾಹುತಗಳಿಗೆ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರರು ಕಾರಣರಾಗುತ್ತಾರೆ ಎಂದು ಸಮತಾ ಸೈನಿಕದಳ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಶಂಕರ ಸಣ್ಣಕ್ಕಿ, ರಾಘು ಚಿಂಚಲಿ, ವಿಠ್ಠಲ ಗೊರಜಪ್ಪಗೋಳ, ಕೃಷ್ಣಾ ಕರೆವ್ವಗೋಳ, ಮಲ್ಲಪ್ಪ ಗೋಕಾಕ, ವಿಠ್ಠಲ ಬಾ ಗಂಡವ್ವಗೋಳ, ಶಂಕರ ವಾಘ, ರಾಘು ಮೇತ್ರಿ ಸೇರಿದಂತೆ ಸಂಘಟನೆಯ ಅನೇಕ ಕಾರ್ಯಕರ್ತರು ಇದ್ದರು.