RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಶಿಕ್ಷಣ ಜನಸಾಮಾನ್ಯರಿಗೂ ನೀಡಲು ಕೆ.ಎಲ್.ಇ ಸಂಸ್ಥೆ ಸ್ಥಾಪಿಸಿದ ಮಹಾನ ಚೇತನರಲ್ಲಿ ಶಿರಸಂಗಿ ಲಿಂಗರಾಜ ಮಹಾರಾಜರು ಒಬ್ಬರು : ,ಚಂದ್ರಶೇಖರ್ ಅಕ್ಕಿ

ಗೋಕಾಕ:ಶಿಕ್ಷಣ ಜನಸಾಮಾನ್ಯರಿಗೂ ನೀಡಲು ಕೆ.ಎಲ್.ಇ ಸಂಸ್ಥೆ ಸ್ಥಾಪಿಸಿದ ಮಹಾನ ಚೇತನರಲ್ಲಿ ಶಿರಸಂಗಿ ಲಿಂಗರಾಜ ಮಹಾರಾಜರು ಒಬ್ಬರು : ,ಚಂದ್ರಶೇಖರ್ ಅಕ್ಕಿ 

ಶಿಕ್ಷಣ ಜನಸಾಮಾನ್ಯರಿಗೂ ನೀಡಲು ಕೆ.ಎಲ್.ಇ ಸಂಸ್ಥೆ ಸ್ಥಾಪಿಸಿದ ಮಹಾನ ಚೇತನರಲ್ಲಿ ಶಿರಸಂಗಿ ಲಿಂಗರಾಜ ಮಹಾರಾಜರು ಒಬ್ಬರು : ,ಚಂದ್ರಶೇಖರ್ ಅಕ್ಕಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 10 :

 

ಉಚ್ಚ ಮಟ್ಟದ ಜನರಿಗೆ ಸಿಮೀತವಾಗಿದ್ದ ಶಿಕ್ಷಣವನ್ನು ಅಂದಿನ ಕಾಲದಲ್ಲಿ ಜನ ಸಾಮಾನ್ಯರಿಗೂ ನೀಡಲು ಕೆ.ಎಲ್.ಇ ಸಂಸ್ಥೆ ಸ್ಥಾಪಿಸಿದ ಮಹಾನ ಚೇತನರಲ್ಲಿ ಶಿರಸಂಗಿ ಲಿಂಗರಾಜ ಮಹಾರಾಜರು ಒಬ್ಬರು ಎಂದು ಪ್ರೋ ಚಂದ್ರಶೇಖರ ಅಕ್ಕಿ ಹೇಳಿದರು

ಶುಕ್ರವಾರದಂದು ನಗರದ ಕೆ.ಎಲ್.ಇ ಸಂಸ್ಥೆಯ ಸಿ.ಎಸ್. ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸ್ಥಳೀಯ ಕೆ.ಎಲ್.ಇ ಅಂಗ ಸಂಸ್ಥೆಗಳು ಹಮ್ಮಿಕೊಂಡ ತ್ಯಾಗವೀರ ಶಿರಸಂಗಿ ಲಿಂಗರಾಜರ 159 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು

ಸಮಾಜದ ಋಣ ತೀರಿಸುವುದು ಮನುಷ್ಯರ ಕರ್ತವ್ಯವಾಗಿದ್ದು ಅಂತವರು ಜನರ ಮನದಲ್ಲಿ ಸದಾ ಉಳಿಯುತ್ತಾರೆ. ಸಮಾಜಮುಖಿ ಬದುಕನ್ನು ಬದುಕಿದ ಲಿಂಗರಾಜರು ತಮ್ಮ ಇಡೀ ಆಸ್ತಿಯನ್ನು ಕೆ.ಎಲ್.ಇ ಸಂಸ್ಥೆಗೆ ಕೋಡುಗೆಯಾಗಿ ನೀಡಿ ಮಹಾನ ದಾನಿಗಳಾಗಿದ್ದಾರೆ. ಶಿಕ್ಷಣ, ಕೃಷಿ ಸೇರಿದಂತೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶಗಳ ಆಚರಣೆಗೆ ತರುವದರೊಂದಿಗೆ ಕೆ.ಎಲ್.ಇ ಸಂಸ್ಥೆಯನ್ನು ಇನ್ನೂ ಹೆಮ್ಮರವಾಗಿ ಬೆಳೆಸಲು ಕರೆ ನೀಡಿದರು

ವೇದಿಕೆಯ ಮೇಲೆ ಸ್ಥಳೀಯ ಕೆ.ಎಲ್.ಇ ಸಂಸ್ಥೆಗಳ ಮುಖ್ಯಸ್ಥರುಗಳಾದ ಎಂ.ಡಿ ಚುನುಮರಿ , ಜಿ.ಎಂ ಅಂದಾನಿ , ಕೆ.ಸಿ ಹತಪಾಕಿ, ಪದ್ಮಭೂಷಣ ಪಾಟೀಲ , ಅನುಪಾ ಕೌಶಿಕ , ಚಂದ್ರಶೇಖರ , ಆನಂದ ,ಪ್ರಶಾಂತ ಕಿವಟಿ , ದಿವ್ಯಾ ಪಾಲಬಾವಿ ಇದ್ದರು

Related posts: