ಗೋಕಾಕ:ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಶ್ರಮಿಸಿದ ಶ್ರೇಯಸ್ಸು ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ : ರಮೇಶ ಬುದ್ನಿ
ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಶ್ರಮಿಸಿದ ಶ್ರೇಯಸ್ಸು ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ : ರಮೇಶ ಬುದ್ನಿ
ನಮ್ಮ ಬೆಳಗಾವಿ ಇ – ವಾರ್ತೆ ಬೆಟಗೇರಿ ಜ 3 :
ಭಾರತ ದೇಶದ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಶ್ರಮಿಸಿದ ಶ್ರೇಯಸ್ಸು ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ಸಮೀಪದ ತಿಗಡಿ ಗ್ರಾಮದ (ಆರ್‍ಎಮ್‍ಎಸ್‍ಎ) ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಬುದ್ನಿ ಹೇಳಿದರು.
ಸಮೀಪದ ತಿಗಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ (ಆರ್‍ಎಮ್‍ಎಸ್‍ಎ) ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜ.3 ರಂದು ನಡೆದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫುಲೆ ಅವರು ಜ್ಞಾನದ ಬೆಳಕಿಗಾಗಿ ಪರಿತಪಿಸುತ್ತಿರುವ ಮಹಿಳೆಯರಿಗೆ ಹಾಗೂ ಶೋಷಿತರ ಬಾಳಿಗೆ ಅಕ್ಷರ ದಾಸೋಹದ ಬೆಳಕು ನೀಡುವುದರ ಮೂಲಕ ಶ್ರಮಿಸಿದ ದಿಟ್ಟ ಮಹಿಳೆಯಾಗಿದ್ದರು ಎಂದರು.
ಶಿಕ್ಷಕ ಪಿ.ಆರ್.ಮಾಳಿ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದರು.
ಆರ್.ಟಿ.ಬಡಕಲ್, ರಮೇಶಪ್ಪ ಎಚ್.ಜಿ., ಹೊನ್ನಪ್ಪ ಪೂಜೇರ, ಹನುಮಂತ ಹುಚ್ಚೇನ್ನವರ, ಎಸ್.ಎಮ್.ಮಠದ, ಸಿದ್ಧೇಶ್ವರ ಮೆಳವಂಕಿ, ಅಶ್ವಿನಿ ಗಡಾದ, ದ್ರಾಕ್ಷಾಯಿಣಿ ಹಿರೇಮಠ, ಎಮ್.ಎಸ್.ಮಾವಿನಹಿಂಡಿ, ಅರ್,ಪಿ. ಸಬರದ, ಸಿರಾಜ್ ಬಿರ್ಜೆ, ಮಧುಸೂಧನ ಟಿ.ಎಚ್., ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮತ್ತು ಸರ್ಕಾರಿ ಪ್ರೌಢ ಶಾಲೆಯ(ಆರ್‍ಎಮ್‍ಎಸ್‍ಎ), ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.